ಸಿದ್ದಾಪುರ: ಶಿರಸಿಯಲ್ಲಿ ಭಾರೀ ಗಾಳಿ ಮಳೆ ಅವಾಂತರ ಸೃಷ್ಟಿಸಿದ್ದರೆ, ಸಿದ್ದಾಪುರ ತಾಲೂಕಿನಲ್ಲೂ ಭಾರಿ ಗಾಳಿ ಬೀಸಿದ್ದು, ಮನೆ ಮೇಲೆ ತೆಂಗಿನ ಮರ ಬಿದ್ದು ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಕಡಕೇರಿಯಲ್ಲಿ ನಡೆದಿದೆ. ಮನೆಯ ಪಕ್ಕದಲ್ಲಿ ಅಡಿಕೆ ಸಸಿ ಬೆಳೆಸಲು ಕವರ್ ಗೆ ಮಣ್ಣು ತುಂಬುತ್ತಿರುವ ಸಮಯದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ತೆಂಗಿನಮರವು ಬಿದ್ದಿದೆ.
ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿ, ಹೊನ್ನಪ್ಪ ಕೃಷ್ಣ ನಾಯ್ಕ (40), ದಯಾನಂದ ಕೃಷ್ಣ ನಾಯ್ಕ (35), ಮಕ್ಕಳಾದ ಧವನ್ ದಯಾನಂದ ನಾಯ್ಕ (9), ಹಾಗೂ ಹೇಮಶ್ರೀ ಹೊನ್ನಪ್ಪ ನಾಯ್ಕ ( 7) ಗಾಯಗೊಂಡಿದ್ದು, ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮುoಡಗೋಡ: ಭಾರಿಗಾಳಿಗೆ ಮರವೊಂದರ ದೊಡ್ಡ ಟೊಂಗೆ ರಸ್ತೆಗೆ ಅಡ್ಡವಾಗಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಹಾಗೂ ವಾಹನ ಚಾಲಕರು ಪರದಾಡಿದ ಘಟನೆ ಪಟ್ಟಣದ ಹುಬ್ಬಳ್ಳಿ-ಶಿರಸಿ ಯ ಡಿಆರ್‌ಎಫ್‌ಒ ನಾಗರಾಜ ಕಲಾಲ ಮನೆಯ ಹತ್ತಿರ ಸಂಭವಿಸಿದೆ. ಮರದ ಟೊಂಗೆ ವಿದ್ಯುತ್ ತಂತಿಗಳ ಮೇಲೆ ಬಿದ್ದು ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದ ಘಟನಾ ಸ್ಥಳಕ್ಕೆ ತಕ್ಷಣ ಬಂದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪ್ರಸರಣವನ್ನು ತಡೆದಿದ್ದಾರೆ.
ಸಹಜಸ್ಥಿತಿಯತ್ತ ಶಿರಸಿ ಜಾತ್ರೆ: ಭಾರೀ ಗಾಳಿ ಮಳೆಯ ಬಳಿಕ ಶಿರಸಿ ಜಾತ್ರೆ ಪೇಟೆ ಇದೀಗ ಸಹಜ ಸ್ಥಿತಿಗೆ ಮರಳಿದೆ. ಮಾರಿಕಾಂಬೆಯ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ, ವ್ಯಾಪಾರ ವಹಿವಾಟು ನಿಧಾನವಾಗಿ ಆರಂಭಗೊoಡಿದೆ. ಅಸಾನಿ ಚಂಡಮಾರುತ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಅಪ್ಪಳಿಸಲಿದ್ದು, ವಾಯುಭಾರ ಕುಸಿತದ ಕಾರಣ ಕರಾವಳಿಯ ದಕ್ಷಿಣ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೇ ವೇಳೆ, ಉತ್ತರಕನ್ನಡ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಇದೆ.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.
ಜಾಗ ಮಾರಾಟಕ್ಕಿದೆ: ಆರು ಗುಂಟೆ ರೆವೆನ್ಯೂ ಜಾಗ ಮಾರಾಟಕ್ಕಿದೆ. ಕುಮಟಾ-ಅಘನಾಶಿನಿ ರಸ್ತೆ ಕಡ್ಲೆ ಚರ್ಚ್ ಸಮೀಪ ಮುಖ್ಯರಸ್ತೆಗೆ ಹೊಂದಿಕೊAಡಿದೆ. ಸಮುದ್ರ ತೀರಕ್ಕೆ ಸಮೀಪವಿರುವ ಉತ್ತಮ ಜಾಗ. ಮನೆ ಮತ್ತು ವಾಣಿಜ್ಯ ಬಳಕೆಗೂ ಯೋಗ್ಯವಾಗಿದೆ. ಸಂಪರ್ಕಿಸಿ: 8217540072, 9448729199