ಅಮ್ಮನವರು ಮತ್ತು ಬೀರದೇವರ ವರ್ಧಂತಿ ಉತ್ಸವ: ಫೆ.27 ರಂದು ಸೂರ್ವೆಯಲ್ಲಿ ಅನ್ನಸಂತರ್ಪಣೆ

ಅಂಕೋಲಾ: ತಾಲೂಕಿನ ಧಾರ್ಮಿಕ ಶಕ್ತಿ ಕೇಂದ್ರಗಳಲ್ಲಿ ಒಂದಾದ, ಸೂರ್ವೆ ಗ್ರಾಮದ ಶ್ರೀ ಅಮ್ಮನವರು ಮತ್ತು ಶ್ರೀ ಬೀರ ದೇವರ ವಾರ್ಷಿಕ ವರ್ದಂತಿ ಉತ್ಸವ ಮಾರ್ಚ್ 26 ಮತ್ತು 27 ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಯಲಿದೆ.ಮಾರ್ಚ್ 26 ರಂದು ಸಂಜೆ 7 ಗಂಟೆಯಿಂದ ಕಲಾಭಿವೃದ್ಧಿ ಹೋಮ ನಡೆಯಲಿದ್ದು ಮಾರ್ಚ್ 27 ರಂದು ಬೆಳಿಗ್ಗೆ 10.30 ರಿಂದ ಪಂಚಾಮೃತ ಅಭಿಷೇಕ, ಪೂರ್ಣಾಹುತಿ ಹವನ, ಅಲಂಕಾರ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ  ನಡೆಯಲಿದೆ.

ರವಿವಾರ ಮದ್ಯಾಹ್ನ 12 ಗಂಟೆಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಸಂಜೆ 8 ಗಂಟೆಯಿಂದ ಭಜನಾ ಸಪ್ತಾಹದ ಅಂಗವಾಗಿ ದೇವರ ವಿಶೇಷ ಪೂಜೆ  ಮತ್ತು ಸವಾಲು ಕಾರ್ಯಕ್ರಮ ನಡೆಯಲಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಆಡಳಿತ ಮಂಡಳಿ ಪ್ರಮುಖರು, ಸೂರ್ವೆಯ ಊರನಾಗರಿಕರು ಹಾಗೂ ಯುವಕ ಸಂಘದವರು   ಪ್ರಕಟನೆಯಲ್ಲಿ ತಿಳಿಸಿದ್ದಾರೆ.                       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version