Follow Us On

WhatsApp Group
Important
Trending

ಲಾರಿಯ ಹಿಂಬಾಗಕ್ಕೆ ಕಾರು ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

ಹೆದ್ದಾರಿ ಅಂಚಿಗೆ ನಿಂತುಕೊಂಡಿದ್ದ ಟ್ಯಾಂಕರ್ ಲಾರಿಯ ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಪಡಿಸಿಕೊಂಡು ನಾಲ್ವರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ತಾಲೂಕಿನ ಬಾಳೆಗುಳಿ ವರದರಾಜ ಹೊಟೇಲ ಹತ್ತಿರ ಈ ರಸ್ತೆ ಅಪಘಾತ ಸಂಭವಿಸಿದೆ.

ಪುಣಾ ಮೂಲದ ವೈದ್ಯರು ಮತ್ತು ಕುಟುಂಬಸ್ಥರು, ಮತ್ತಿತರರು ಎರಡು ಕಾರುಗಳಲ್ಲಿ ಗೋಕರ್ಣ ಪ್ರವಾಸ ಮುಗಿಸಿ ಗೊವಾಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ದಾರಿಮಧ್ಯೆ 1 ಕಾರ್ ಅಪಘಾತಕ್ಕೆ ಈಡಾಗಿದೆ. ಅರವಿಂದ ಎನ್ನುವವರು ಚಲಾಯಿಸುತ್ತಿದ್ದರು ಎನ್ನಲಾದ ಕಾರ್ ಬಾಳೆಗುಳಿ  ಬಳಿ  ಕಿರು ಸೇತುವೆ ದಾಟಿ, ವರದರಾಜ ಹೊಟೆಲ್ ಹತ್ತಿರ ಹೆದ್ದಾರಿ ಅಂಚಿನಲ್ಲಿ ನಿಂತುಕೊಂಡಿದ್ದ ಟ್ಯಾಂಕರ್ ಲಾರಿಯ ಹಿಂಭಾಗಕ್ಕೆ ಜೋರಾಗಿ ಗುದ್ದಿಕೊಂಡಿದೆ.

ಕಾರಿನಲ್ಲಿ ಅಕಸ್ಮಿಕವಾಗಿ ಕಾಣಿಸಿಕೊಂಡ ಟೈಯರ್ ಅಥವಾ ಇತರೆ ತಾಂತ್ರಿಕ ದೋಷ ಅಥವಾ ಚಾಲಕನ ಅಜಾಗರೂಕತೆ ಇಂದ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕಪಥ ರಸ್ತೆಯಲ್ಲಿ ಸಾಗುತ್ತಿದ್ದ ಕಾರ್ ಟ್ಯಾಂಕರ್ ಗೆ  ಜೋರಾಗಿ ಗುದ್ದಿ ಕೊಂಡ ಪರಿಣಾಮ ಕಾರನ ಮುಂಭಾಗ ತೀವೃ ಜಖಂಗೊಂಡಿದೆ.

ಅಪಘಾತದ ತೀವೃತೆಗೆ ಕಾರ್ ಎಡಗಡೆಯಿಂದ  ಬಲಗಡೆ ಡಿವೈಡರ್ ಬಳಿ ಹೊರಳಿ ಪಥ ಬದಲಿಸಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಾರು  ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರೂ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಅವರಿಗೆ ಅಂಕೋಲಾ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸಿದರು. ಐಆರ್ ಬಿ ಹಾಗೂ ತಾಲೂಕಾ ಆಸ್ಪತ್ರೆ ಅಂಬುಲೆನ್ಸ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ನಾಯ್ಕ ಇತರರು ಸಹಕರಿಸಿದರು. 

ಹೆಚ್ಚಿನವರು ವೈದ್ಯರಾಗಿದ್ದು ಮಂಗಳೂರಿನಿಂದ ಪೂಣಾಕ್ಕೆ ಹೊರಟಿದ್ದರೆಂದು ತಿಳಿದು ಬಂದಿದೆ. ಕಾರಿನಲ್ಲಿದವರ ಪ್ರಕಾರ ಕಾರಿನ ತಾಂತ್ರಿಕ ದೋಷದಿಂದ ಅಪಘಾತವಾಗಿರಬಹುದೆಂದು ಅಂದಾಜಿಸಲಾಗಿದೆ.ಅಪಘಾತ ಪಡಿಸಿದ ಚಾಲಕ ಹಾಗೂ ಕಾರಿನಲ್ಲಿದ್ದ ಇತರರೆಲ್ಲರೂ ಬಹುತೇಕ ವಯೋವೃದ್ಧರು ಎನ್ನಲಾಗಿದೆ. ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button