ವಿಚಾರಿಸಲು ಕರೆದ ವೇಳೆ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳ ಮೇಲೆಯೇ ಹಲ್ಲೆ: ಅವಾಚ್ಯ ಶಬ್ದದಿಂದ ಬೈದು ಜೀವಬೆದರಿಕೆ

ಸಿದ್ದಾಪುರ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳ ಮೇಲೆ ನಾಲ್ವರು ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ಹಾಳದಕಟ್ಟದಲ್ಲಿ ನಡೆದಿದೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳು ಹಾಳದಕಟ್ಟಾದ ಬಳಿ ರಸ್ತೆ ಪಕ್ಕದಲ್ಲಿ ನಿಂತ ಓಮಿನಿಯ ಒಳಗೆ ಮತ್ತು ಹೊರಗಡೆ ಲೈಟ್ ಹಾಕಿಕೊಂಡಿದ್ದು ಇವರನ್ನ ವಿಚಾರಿಸಲು ಕರೆದಾಗ ಆರೋಪಿತರು ಏಕಾಏಕಿ ಪೊಲೀಸರ ಶರ್ಟ್ ಹಿಡಿದು ಎಳೆದಾಡಿ ಹೊಡೆದು ದುಡಿದ್ದಾರೆ. ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಾಲ್ಕು ಜನ ಆರೋಪಿತರ ಮೇಲೆ ದೂರು ನೀಡಲಾಗಿದೆ.

ಚಂದ್ರಕಾoತ್ ರಾಮಪ್ಪ ಜಿಂಗಾಡೆ, ರವಿ ರಾಮಪ್ಪ ಜಿಂಗಾಡೆ, ರಾಮಪ್ಪ ಜಿಂಗಡೆ, ಪವನ್ ನಾಯ್ಕ್ ಸೇರಿಕೊಂಡು ಕರ್ತವ್ಯದಲ್ಲಿದ್ದ ಶ್ರೀಶೈಲ ಉಪ್ಪಾರಟ್ಟಿ ಮತ್ತು ಜಟ್ಟಪ್ಪ ಕೆಲೂರ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version