ಕಾರವಾರ: ಪೆಟ್ರೋಲ್ ಡಿಸೇಲ್ ಬೆಲೆ ನಿತ್ಯವೂ ಏರತೊಡಗಿದೆ. ಅಡಿಗೆ ಅನಿಲ ಈಗಾಗಲೇ ಕೈಗೆಟುಕದಂತಾಗಿದೆ. ಇಂತಹ ಕಠಿಣ ಪರಿಸ್ಥಿತಿ ನಡುವೆ ತರಕಾರಿ ಮಾರುಕಟ್ಟೆಗಳತ್ತ ಮುಖ ಮಾಡಿದ ಗ್ರಾಹಕರಿಗೆ ಅಲ್ಲಿಯೂ ಬೆಲೆ ಏರಿಕೆ ಬಿಸಿ ಕಂಗಾಲಾಗುವಂತೆ ಮಾಡಿದ್ದು ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಹೌದು ವಾರಕೊಮ್ಮೆ ತರಕಾರಿ ಮಾರುಕಟ್ಟೆಗೆ ಹೋಗಿ ಪ್ರೆಸ್ ಆಗಿರುವ ತರಕಾರಿ ತಂದು ರುಚಿಯಾದ ಅಡುಗೆ ಮಾಡಿ ಊಟ ಮಾಡೋಣ ಎಂದು ಕೊಂಡವರಿಗೆ ತರಕಾರಿ ಬೆಲೆ ಶಾಕ್ ಕೊಟ್ಟಿದೆ. ಉ.ಕ ಜಿಲ್ಲೆಯಲ್ಲಿ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ.
ಹಚ್ಚು ಹಸಿರಾಗಿ ಸೊಂಪಾಗಿದ್ದಾಳೆ ಅಂತಾ ಹಸಿ ಮೆಣಸಿನ ಕಾಯಿ ಹತ್ರಾ ಹೋದ್ರೆ ಕಣ್ಣಲ್ಲಿ ನೀರು ಬರುತ್ತೆ, ಕೆಂಪು ಸುಂದರಿ ಕ್ಯಾರೇಟ್ ಹತ್ತಿರ ಹೊದ್ರೆ ಕಚ್ಚೆ ಬಿಡುತ್ತಾಳೆ, ನುಗ್ಗೆ ಕಾಯಿ ನೋಡಿದ್ರೆ ಹೊಡದೆ ಬಿಡುತ್ತಾಳೆ ಅಷ್ಟೊಂದು ಬೆಲೆ ಏರಿಕೆ ಮಾರುಕಟ್ಟೆ ಯಲ್ಲಿ ಕಂಡು ಬರುತ್ತಿದೆ. ಕಳೆದ ಕೆಲ ವಾರಗಳಿಂದ ತರಕಾರಿಯ ಬೆಲೆ ಏರಿಳಿತವಾಗುತ್ತಲೇ ಇದೆ. ಅತಿಯಾದ ಮಳೆಗೆ ಮತ್ತು ರೋಗ ಬಾದೆಗೆ ತರಕಾರಿ ಬೆಳೆಗಳ ಇಳಿವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ.
ಮುಖ್ಯವಾಗಿ ಆಂದ್ರ, ಮಹಾರಾಷ್ಟ್ರ ಹೀಗೆ ಹೊರ ರಾಜ್ಯಗಳಿಂದ ಹೆಚ್ಚಾಗಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿದ್ದವು ಆದರೆ ಈಗ ಬರುತ್ತಿಲ್ಲ. ಹೀಗಾಗಿ ಬೆಲೆ ಗಗನಕ್ಕೇರಿದೆ. ಮೆಣಸಿನಕಾಯಿ ಬೆಲೆ 80 ರಿಂದ 100, ಬೀನ್ಸ್ ಬೆಲೆ 60 ರಿಂದ 80, ಟೊಮೆಟೊ 30, ಒಂದು ಲಿಂಬುಗೆ 5 ರೂಪಾಯಿ ಆಗಿದೆ. ಈ ರಂಜಾನ್ ತಿಂಗಳಿನಲ್ಲಿ ದಿನಬಳಕೆಯ ವಸ್ತುಗಳಾದ ಎಣ್ಣೆ, ಸಿಲೆಂಡರ್ ಬೆಲೆ ಕೂಡ ಏರಿಕೆಯಾಗಿದೆ. ಇಂತಹ ದುಬಾರಿ ದುನಿಯಾದಲ್ಲಿ ಬಡವರು, ಮಧ್ಯಮ ವರ್ಗದವರು ಬದಕುವುದಾದರು ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ ಎನ್ನುತ್ತಾರೆ ಗ್ರಾಹಕರು.
ಇನ್ನೂ ಪ್ರಮುಖ ವಾಗಿ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬರುತ್ತಿತ್ತು ಆದರೆ ಈಗ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಕಾರಣ ಅತೀಯಾದ ಮಳೆ ಮತ್ತು ಬೆಳೆಗಳಿಗೆ ರೋಗ ಬಾದೆ ಹೀಗಾಗಿ ತರಕಾರಿ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ.
ಇದಲ್ಲದೆ ತರಕಾರಿಗಳ ಬೆಲೆ ಗಗನಕ್ಕೇರಲು ಪ್ರಮುಖ ಕಾರಣ ಪೆಟ್ರೋಲ್, ಡಿಸೇಲ್ ತೈಲ ಬೆಲೆ ಏರಿಕೆ. ತರಕಾರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತರಬೇಕಾದರೆ ವಾಹನಗಳು ಮೂಲಕವೇ ತಲುಪಿಸಬೇಕಾಗುತ್ತದೆ.. ಹೀಗಾಗಿ ಟ್ರಾನ್ಸ್‌ಪೋರ್ಟ್ ಚಾಜ್‌೯ ಜಾಸ್ತಿಯಾಗುವ ಹಿನ್ನೆಲೆ ಅದು ತರಕಾರಿ ಮೇಲೆಯು ಬಿಳುತ್ತೆ…
ನೇರವಾಗಿ ರೈತರಿಂದ ತರಕಾರಿ ಖರೀದಿ ಕಡಿಮೆ ಬೆಲೆಯಲ್ಲಿಯಾದರು ಮಾರುಕಟ್ಟೆಗೆ ತಂದು ಮಾರಾಟ ಮಾಡಬೇಕಾದರೆ ಹೆಚ್ಚಿನ ಬೆಲೆ ಆಗುತ್ತೆ.. ಕಾರಣ ತೈಲ ಬೆಲೆ, ವಾಹನಗಳು ಬಾಡಿಗೆ, ಆಳುಗಳ ಕೂಲಿ ಎಲ್ಲವು ಏರಿಕೆಯಾಗಿದೆ ಹೀಗಾಗಿ ತರಕಾರಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.
ಒಟ್ಟಾರೆಯಾಗಿ ತರಕಾರಿಗಳ ಬೆಲೆ ಪ್ರತಿನಿತ್ಯ ಏರಿಕೆ ಕಾಣುತ್ತಿದ್ದು.. ತರಕಾರಿಗಳು ಸಹವಾಸವೇ ಬೇಡ ಎನ್ನುವಂತಾಗಿದೆ. ಸರ್ಕಾರ ಇನ್ನಾದರೂ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳುವ ಮೂಲಕ ಜನ ಸಾಮಾನ್ಯರ ಬದುಕು ಸರಿಯಾದ ಹಾದಿಯಲ್ಲಿ ಹೋಗುವಂತೆ ಸಹಕಾರ ಮಾಡಬೇಕಿದೆ.
ವಿಸ್ಮಯ ನ್ಯೂಸ್ ಕಾರವಾರ