Follow Us On

WhatsApp Group
Focus News
Trending

ಹೊನ್ನಾವರ ಒಕ್ಕಲಿಗ ಸಮುದಾಯ ಭವನದಲ್ಲಿ ವಿಜೃಂಭಣೆಯಿoದ ನಡೆದ” ಒಕ್ಕಲು ಉತ್ಸವ”

ಹೊನ್ನಾವರ: ತಾಲೂಕಾ ಒಕ್ಕಲಿಗರ ಸಂಘದಿoದ ಕೆಗಿನೂರಿನ ಹೊಳಾಕುಳಿಯ ಒಕ್ಕಲಿಗ ಸಮುದಾಯ ಭವನದಲ್ಲಿ ” ಒಕ್ಕಲು ಉತ್ಸವ” ವಿಜೃಂಬಣೆಯಿoದ ನಡೆಯಿತು. ಒಕ್ಕಲಿಗರ ಸ್ಪೋರ್ಟ್ಸ್ ಕ್ಲಬ್ ರಚನೆಯ ಭಾಗವಾಗಿ ಹೊನ್ನಾವರ ತಾಲ್ಲೂಕಿನ ಒಕ್ಕಲಿಗ ಕಬಡ್ಡಿ ಆಟಗಾರರಿಗೆ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವುದು ವಿಶೇಷವಾಗಿತ್ತು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಮಂಕಿಯಿoದ ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದವರೆಗೆ ಬೈಕ್ ರ್ಯಾಲಿ ಮೂಲಕ ಸ್ವಾಮಿಜಿಯವರನ್ನು, ಗಣ್ಯರನ್ನು ಬರಮಾಡಿಕೊಂಡರು.

ತಾಲ್ಲೂಕಿನ ಒಕ್ಕಲಿಗ ಕ್ರೀಡಾಪಟುಗಳ ಶ್ರೇಯೋಭಿವೃದ್ಧಿಗಾಗಿ ಒಕ್ಕಲಿಗರ ಸ್ಪೋರ್ಟ್ಸ್ ಕ್ಲಬ್ ಮತ್ತು ಮಹಿಳೆಯರ ಸಂಘಟನೆ ಮತ್ತು ಆರ್ಥಿಕ ಸ್ವಾವಲಂಬನೆಯ ನಿರೀಕ್ಷೆಯೊಂದಿಗೆ ಮಹಿಳಾ ಸಹಕಾರಿ ಸಂಘ ರಚನೆಗೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ ಚಾಲನೆ ನೀಡಿದರು.

ನಂತರ ಆರ್ಶಿವಚನ ನೀಡಿದ ಶ್ರೀಗಳು ಒಕ್ಕಲಿಗರು ಶ್ರಮ ಜೀವಿಗಳು. ಸಮಾಜದವರು ಸಂಘಟಿತರಾಗಲು ಶೈಕ್ಷಣಿಕ ಸಾಧನೆ ಮಾಡಬೇಕಿದೆ. ಶೈಕ್ಷಣಿಕವಾಗಿ ಸಂಘಟಿತರಾದಾಗ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ದಿ ಸಾಧ್ಯ. ಮಠದಲ್ಲಿ ಸಕಲ ರೀತಿಯ ಸೌಲಭ್ಯ ಹೊಂದಿದ್ದು, ಸಮಾಜ ಭಾದಂವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.

ನಂತರ ಶ್ರೀಮಠದ ಪ್ರಧಾನ ಕಾರ್ಯದರ್ಶಿಯವರು ಶಿವಮೊಗ್ಗ ಉತ್ತರಕನ್ನಡ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಮಾತನಾಡಿ ದೇಶಿಯ ಕ್ರೀಡೆಯಾದ ಕಬ್ಬಡ್ಡಿ ಮನ್ನಣೆ ನೀಡಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಆರೊಗ್ಯ ಸುಧಾರಣೆಗೆ ಕ್ರೀಡೆ ಅತಿಅಗತ್ಯವಾಗಿದೆ. ಅಲ್ಲದೇ ಮಹಿಳಾ ಸಂಘಟನೆಗಾಗಿ ಭೈರವಿ ಮಹಿಳಾ ಪತ್ತಿನ ಸಂಘದ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದುವoತಾಗಲಿ ಎಂದು ಶುಭ ಹಾರೈಸಿದರು.

ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಒಕ್ಕಲಿಗರು ಸಂಘಟಿತರಾದರೆ, ಏನನ್ನಾದರೂ ಸಾಧಿಸಬಲ್ಲರು. ಸ್ಪೊರ್ಟ್ಸ ಕ್ಲಬ್ ಮೂಲಕ ಯುವಕರು ಸಂಘಟಿತರಾಗಿ, ಮಹಿಳಾ ಪತ್ತಿನ ಮೂಲಕ ಮಹಿಳಾ ಸಂಘಟನೆಯಾಗುವoತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಒಕ್ಕಲಿಗ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಕುಮಟಾ ಶಾಖಾಮಠದ ನಿಶ್ಚಲನಂದ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಡಾ. ಅಂಜನಪ್ಪ ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button