ಹುಲ್ಲು ಸಾಗಿಸುತ್ತಿದ್ದ ಬೊಲೆರೋ ವಾಹನಕ್ಕೆ ಬೆಂಕಿ: ಸುಟ್ಟು ಕರಕಲಾದ ವಾಹನ

ಅಂಕೋಲಾ: ಭತ್ತದ ಒಣ ಹುಲ್ಲನ್ನು ತುಂಬಿ ಸಾಗಿಸುತ್ತಿದ್ದ ವಾಹನವೊಂದು ದಾರಿಮಧ್ಯೆ ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲುಕಿ ಸುಟ್ಟು ಕರಕಲಾದ ಘಟನೆ ಬೆಳಸೆ ಗ್ರಾಪಂ ವ್ಯಾಪ್ತಿಯ ತಳಗದ್ದೆ ರೈಲ್ವೆ ಬ್ರಿಜ್ ಹತ್ತಿರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಶೇಖರ ಸುಕ್ರು ಗೌಡ ಇವರು ಬೊಲೆರೋ ಪಿಕಪ್ ವಾಹನದಲ್ಲಿ ತಳಗದ್ದೆಯಿಂದ – ಕುಮಟಾ ಕಡೆ ತಮ್ಮ ವಾಹನದಲ್ಲಿ ಸುಮಾರು 2000 ಕಟ್ ಗಳಷ್ಟು ಒಣ ಹುಲ್ಲನ್ನು ಸಾಗಿಸುತ್ತಿರುವ ವೇಳೆ, ದಾರಿಮಧ್ಯೆ ವಿದ್ಯುತ್ತ ತಂತಿ ತಗುಲಿ ,ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ.

ಗಾಡಿಯ ಹಿಂಬದಿ ಬೆಂಕಿ ತಗುಲಿದ್ದರೂ, ಗಾಡಿ ಚಲಾಯಿಸುತ್ತಿದ್ದ ಚಾಲಕನಿಗೆ ತಡವಾಗಿ ಗಮನಕ್ಕೆ ಬಂದು ಗಾಡಿ ನಿಲ್ಲಿಸಿ ನೋಡುವಷ್ಟರಲ್ಲಿ ಬೆಂಕಿ ಹೊತ್ತಿ ಉರಿಯಲಾರಂಬಿಸಿದೆ. ನಂತರ ಅಗ್ನಿ ಶಾಮಕ ಠಾಣೆಗೆ ವಿಷಯ ತಿಳಿಸಲಾಯಿತು.ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸ್ಥಳೀಯರು ಸಹಕರಿಸಿದರು. ನೀರಿನ ಟ್ಯಾಂಕರನ್ನು ಪ್ರತ್ಯೇಕವಾಗಿ ತಂದು ಬೆಂಕಿ ನಂದಿಸಲು ಯತ್ನಿಸಲಾಯಿತು.

ಈ ವೇಳೆಗಾಗಲೇ ಗಾಡಿಯಲ್ಲಿದ್ದ ಬಹುತೇಕ ಹುಲ್ಲಿನ ಕಟ್ಟುಗಳು ಬೆಂಕಿಗಾಹುತಿಯಾಗಿದ್ದವು. ಗಾಡಿಯ ಟೈರ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಗಾಡಿಯ ಮುಂಭಾಗದ ಸ್ಟೇರಿಂಗ್ ಹತ್ತಿರ, ಹಾಗೂ ಡ್ರೈವರ್ ಸೀಟ್ ಮತ್ತಿತರ ಭಾಗಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿವೆ . ಸೀಟ ಪಕ್ಕ ಕೆಳಗಡೆ ಇಟ್ಟಿದ್ದ ಹಲಸಿನ ಹಣ್ಣು ಸಹ ಗುರುತಿಸಲಾಗದಂತೆ ಕರಕಲಾಗಿದೆ. ಸುಮಾರು 7000 ರೂ ಮೌಲ್ಯದ ಒಣಹುಲ್ಲು, ತಾಡಪತ್ರೆ ಹಾಗೂ ಲಕ್ಷಾಂತರ ಮೌಲ್ಯದ ವಾಹನ ಸುಟ್ಟು ಹೋಗಿದ್ದು ಒಟ್ಟಾರೆ ಅಂದಾಜು ಹಾನಿ ಹಾಗೂ ಇತರೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version