ಮುಳುಗುವ ಹಂತಕ್ಕೆ ತಲುಪಿದ ರಿವರ್ ರ‍್ಯಾಪ್ಟಿಂಗ್ ಬೋಟ್ : ಮಕ್ಕಳು ನೀರಿಗೆ ಬಿದ್ದು ಆತಂಕ

ಕಾರವಾರ: ಆ ಬೋಟ್ ನಲ್ಲಿ 12 ಪ್ರವಾಸಿಗರು ಇದ್ದರು. ಬೋಟ್ ಮುಳುಗುವ ಹಂತಕ್ಕೆ ತಲುಪಿತ್ತು. ಎಲ್ಲರೂ ಆತಂಕದಿoದ ಕೂಗಿಕೊಳ್ಳುತ್ತಿದ್ದರು. ಹೌದು, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಬೋಟ್ ನಲ್ಲಿ ಕೂರಿಸಿದ ಪರಿಣಾಮವಿದು.. ಅಗತ್ಯಕ್ಕಿಂದ ಹೆಚ್ಚು ಪ್ರಮಾಣದ ಪ್ರವಾಸಿಗರನ್ನು ಕೂರಿಸಿಕೊಂಡು ರಿವರ್ ರ‍್ಯಾಫ್ಟಿಂಗ್ ಮಾಡುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ನದಿಯಲ್ಲಿ, ಮುಳುಗುವ ಹಂತ ತಲುಪಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ 12 ಜನರ ಜೀವ ಉಳಿದಿದೆ.

ಸ್ವಲ್ಪದರಲ್ಲೇ 12 ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರ ಸಮಯಪ್ರಜ್ಞೆ ಹಾಗೂ ರಕ್ಷಣಾ ಕಾರ್ಯದಿಂದ 12 ಮಂದಿ ಬದುಕುಳಿಯುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಘಟನೆ ಸಂಭವಿಸಿದೆ. ಸಮೀಪದಲ್ಲೇ ಇದ್ದ ಪ್ರವಾಸಿಗರು ರಕ್ಷಣೆಗೆ ಬಂದು, 12 ಪ್ರವಾಸಿಗರ ಜೀವ ರಕ್ಷಿಸಿದ್ದಾರೆ.

ರಬ್ಬರ್ ಬೋಟ್‌ನಲ್ಲಿ 6 ಕ್ಕಿಂತ ಹೆಚ್ಚು ಮಂದಿ ರಿವರ್ ರ‍್ಯಾಫ್ಟಿಂಗ್ ಮಾಡುವಂತಿಲ್ಲ. ಆದರೆ, 12 ಪ್ರವಾಸಿಗರನ್ನು ಬೋಟ್ ನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಹೀಗಾಗಿ ಭಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದೆ ಎನ್ನಲಾಗಿದೆ. ಈ ವೇಳೆ ಕೆಲ ಮಕ್ಕಳೂ ನೀರಿಗೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಘಟನೆ ಸಂಬoಧ ಜೋಯಿಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಜೋಯ್ಡಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version