ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದ ಹಾಲಿನ ಹೊಳೆ: ತಾ ಮುಂದು ನಾ ಮುಂದು ಎನ್ನುತ್ತಾ ಹಾಲನ್ನು ತುಂಬಿಸಿಕೊಂಡ ಜನ
ಅಂಕೋಲಾ: ಮಹಾರಾಷ್ಟ್ರದ ಕೋಲಾಪುರದಿಂದ ಕೇರಳಕ್ಕೆ ಹಾಲು ತುಂಬಿ ಸಾಗುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಹಾಲಿನ ಹೊಳೆ ಹರಿದು ಹೋಗಿರುವ ಘಟನೆ ರಾ.ಹೆ. ಯಲ್ಲಾಪುರ -ಅಂಕೋಲಾ ಮಧ್ಯೆ ಶುಕ್ರವಾರ ಮದ್ಯಾಹ್ನ ಅರಬೈಲ್ ಘಟ್ಟದ ಬಳಿ ಸಂಭವಿಸಿದೆ.
ಅರಬೈಲ್ ಘಟ್ಟದ ತಿರುವಿನಲ್ಲಿ ವಾಹನದ ಬ್ರೇಕ್ ಪೇಲ್ ಆಗಿರುವುದು ಅಪಘಾತಕ್ಕೆ ಕಾರಣವಾಗಿದ್ದು ಚಾಲಕನಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಪಲ್ಟಿಯಾದ ವಾಹನದ ಟ್ಯಾಂಕರ್ ನಿಂದ ಹಾಲು ರಸ್ತೆ ಮೇಲೆ ಹರಿದು ಹೋಗುತ್ತಿದ್ದು ಸುಮಾರು 20 ಸಾವಿರ ಲೀಟರ್ ಹಾಲು ರಸ್ತೆ ಪಾಲಾಗಿದೆ.
ಟ್ಯಾಂಕರ್ ನಿಂದ ಸೋರುತ್ತಿರುವ ಹಾಲು ಸಂಗ್ರಹಿಸಲು ಕೆಲವರು ಪಾತ್ರೆ, ಬಕೇಟ್ ತಂಬಿಗೆಗಳೊಂದಿಗೆ ಮುಗಿ ಬಿದ್ದಿರುವುದು ಕಂಡು ಬಂದಿದ್ದು ಸಿಕ್ಕಷ್ಟು ಹಾಲು ತುಂಬಿ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿದೆ.ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ