Follow Us On

WhatsApp Group
Important
Trending

ಮೇ 4 ರಂದು ಅಂಕೋಲಾ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಮೇಳ|ಆಧಾರ ಕಾರ್ಡ, ರೇಷನ್ ಕಾರ್ಡ್ ತಪ್ಪದೇ ತನ್ನಿ: ಹಲವು ಆರೋಗ್ಯ ಸೇವೆ ಉಚಿತವಾಗಿ ಪಡೆಯಿರಿ

ಅಂಕೋಲಾ: ಜಿಲ್ಲಾ ಪಂಚಾಯತಿ ಉತ್ತರ ಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತಾಲೂಕು ಆಡಳಿತ ಅಂಕೋಲಾ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಆರೋಗ್ಯ ಆಭಿಯಾನದ ಅಡಿಯಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಮೇ 4 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ನಡೆಯಲಿದ್ದು ತಾಲೂಕಿನ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಮೇಳದ ಕುರಿತು ಪಟ್ಟಣದಲ್ಲಿ ಮತ್ತು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಚಾರದ ವ್ಯವಸ್ಥೆ ಮಾಡಲಾಗಿದ್ದು, ಶಿಬಿರದಲ್ಲಿ ಲಭ್ಯವಿರುವ ವೈದ್ಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ವೈದ್ಯರನ್ನು ಸಂಪರ್ಕಿಸಲು ಮಾಹಿತಿಗಾಗಿ 3 ವಿಶೇಷ ಕೌಂಟರ್ ಗಳ ಮೂಲಕ ಸಹಾಯ ಮಾಡಲಾಗುವುದು ಎಂದರು.


ತಾಲೂಕು ಆರೋಗ್ಯಾಧಿಕಾರಿ ಡಾ ನಿತಿನ್ ಹೊಸ್ಮೇಳಕರ ಮಾತನಾಡಿ ಆರೋಗ್ಯ ಮೇಳದಲ್ಲಿ ವೈದ್ಯಕೀಯ ತಜ್ಞರು, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಎಲಬು ಕೀಲು ತಜ್ಞರು, ಮನೋ ವೈದ್ಯಕೀಯ ಚಿಕಿತ್ಸಕರು, ಕಿವಿ, ಮೂಗು,ಗಂಟಲು ತಜ್ಞರು, ಸ್ತ್ರೀ ರೋಗ ತಜ್ಞರು ಲಭ್ಯರಿದ್ದು
ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ಔಷದಿ ಮತ್ತು ಪ್ರಯೋಗಾಲಯ ಸೇವೆ, ಎಚ್. ಐ.ವಿ, ಆರ್. ಟಿ.ಐ, ಎಸ್. ಟಿ.ಐ ಆಪ್ತ ಸಮಾಲೋಚನೆ, ಅಸಾಂಕ್ರಾಮಿಕ ರೋಗ ತಪಾಸಣೆ, ಆಯುಷ ಕ್ಲಿನಿಕ್, ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷಿಕೆ,ಅರ್ಹರಿಗೆ ಆಯುಷ್ಮಾನ ಭಾರತ ಕಾರ್ಡ್,ಆರೋಗ್ಯ ಕಾರ್ಡ್, ಡಿಜಿಟಲ್ ಆರೋಗ್ಯ ಗುರುತಿನ ಕಾರ್ಡ್ ಮೊದಲಾದ ವೈದ್ಯಕೀಯ ಸೇವೆಗಳು, ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದ ಗುಂಪು ಪರೀಕ್ಷೆ ಹಾಗೂ ರಕ್ತದಾನ ಶಿಬಿರ ನಡೆಸಲಿದ್ದೇವೆ ಎಂದ ಅವರು ಕೋವೀಡ್ ಲಸಿಕಾಕರಣದ ಮಾಹಿತಿ ನೀಡಿ ಈ ಹಿಂದೆಮೊದಲ ಡೋಸ್ ಪಡೆದು, ಈ ವರೆಗೆ ಎರಡನೇ ಡೋಸ್ ಪಡೆಯದ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು,ಬೂಸ್ಟರ್ ಡೋಸ್ ಪಡೆಯದ 60 ವರ್ಷ ಮೇಲ್ಪಟ್ಟವರಿಗೆ ಶಿಬಿರದಲ್ಲಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಶಿಬಿರದ ಪ್ರಯೋಜನ ಪಡೆಯುವ ಪ್ರತಿಯೊಬ್ಬರು ಕಡ್ಡಾಯವಾಗಿ ಪಡಿತರ ಕಾರ್ಡ್ ಮತ್ತು ಆಧಾರ ಕಾರ್ಡ್ ತರುವಂತೆ ತಿಳಿಸಿದರು.ಶಾಸಕಿ ರೂಪಾಲಿ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ವಿವಿಧ ಸ್ತರದ ಜನಪ್ರತಿನಿಧಿಗಳು,ಇತರೆ ಗಣ್ಯರು, ಅ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಇಲಾಖೆ ವತಿಯಿಂದ ವಿನಂತಿಸಿದರು.ಆಸಕ್ತ ಸಾರ್ವಜನಿಕರು ತಾಲೂಕ ಮಟ್ಟದ ಆರೋಗ್ಯ ಮೇಳದ ಕುರಿತು ಹೆಚ್ಚಿನ ಮಾಹಿತಿಗಾಗಿ,ತಮ್ಮ ಸಮೀಪದ ಆಶಾ ಕಾರ್ಯಕರ್ತೆಯರು,ಪ್ರಾಥಮಿಕ ಆರೋಗ್ಯ ಕೇಂದ್ರ,ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ,ಇಲ್ಲವೇ ತಾಲೂಕ ಆಸ್ಪತ್ರೆಗೆ ಸಂಪರ್ಕಿಸುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button