Follow Us On

WhatsApp Group
Focus News
Trending

ಶಿಬಿರದಿಂದ ಕೌಶಲ ಸಾಧ್ಯ-ಶೋಭಾ ಭಾಯಿ ಶುಕ್ಲಾ; ಬಹುಮುಖ ಪ್ರತಿಭೆಯ ಶಿಬಿರ-ವಿಜಯೀಂದ್ರ ಜಹಗಿರದಾರ

ಕುಮಟಾ: ಜೀವನ ಶಿಕ್ಷಣ ಕಲೆಯನ್ನು ಬೋಧಿಸುವಇಂತಹ ಸಂಸ್ಕಾರ ಶಿಬಿರದಲ್ಲಿ ಪಾಲಕರನ್ನು ಬಿಟ್ಟಿರುವುದೇ ಮಹಾಪ್ರಯೋಜನವಾಗಿದೆ. ಶಾಲೆಯಲ್ಲಿಜ್ಞಾನ ಸಿಗುತ್ತದೆ.ಆದರೆಇಂತಹ ಶಿಬಿರದಲ್ಲಿ ಕಲೆಯೊಂದಿಗೆ ಕೌಶಲ ಸಿಗುತ್ತದೆ ಎಂದು ಬೆಂಗಳೂರಿನ ಶೋಭಾಭಾಯಿ ಶುಕ್ಲಾಅಭಿಪ್ರಾಯಪಟ್ಟರು. ಅವರುಕತಗಾಲದಸತ್ಸಂಗ ಭವನದಲ್ಲಿಕಲಾಶ್ರೀ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡರಾಜ್ಯ ಮಟ್ಟದ ವಸತಿ ಸಹಿತ 12 ನೇ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಅತಿಥಿಯಾಗಿಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡ ಶಿಬಿರದಿಂದ ಶಹರದಲ್ಲಿರುವ ಮಕ್ಕಳಿಗೆ ಕಷ್ಟಸುಖಗಳ ಸ್ಪಷ್ಟವಾದಅರಿವಾಗುತ್ತದೆ ಅಂದರು.


ಇನ್ನೋರ್ವ ಅತಿಥಿ ಧಾರವಾಡದ ವಿಜಯೀoದ್ರ ಜಹಗಿರದಾರ ಮಾತನಾಡಿ ಇದೊoದು ಬಹುಮುಖ ಪ್ರತಿಭೆಯ ಶಿಬಿರವಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದುಇಲ್ಲಿ ಹತ್ತು ದಿನ ಇದ್ದು ಈಜು, ಸ್ತೋತ್ರ, ಸುಭಾಷಿತ, ಸಂಗೀತ, ವೇದಗಣಿತ, ನೀತಿಕಥೆಮುಂತಾದ 18 ವಿಷಯಗಳನ್ನು ಮತ್ತು ಹತ್ತಾರು ಸಂಪನ್ಮೂಲ ವ್ಯಕ್ತಿಗಳ ಸಂವಾದಜ್ಞಾನವನ್ನುತಮ್ಮದಾಗಿಸಿಕೊoಡವರು ಸಮಾಜದಲ್ಲಿತಮ್ಮಗೌರವವನ್ನು ಹೆಚ್ಚಿಸಿಕೊಳ್ಳುವುದಲ್ಲದೇ ಎಂತಹಕ್ಲಿಷ್ಟ ಸಂದರ್ಭವನ್ನೂಎದುರಿಸಬಲ್ಲರು ಅoದರು ಹಾಗುಎಲ್ಲ ಶಿಬಿರಾರ್ಥಿಗಳಿಗೆ ಹುಬ್ಬಳ್ಳಿಯ ಜೈನ ಪುಸ್ತಕ ಉತ್ಪಾದಕ ಸಂಸ್ಥೆಯವರು ನೀಡಿದಟಿಪ್ಪಣಿ ಪುಸ್ತಕವನ್ನು ವಿತರಿಸಿದರು.

ಕಲಾಶ್ರೀ ಸಂಸ್ಥೆಯಅಧ್ಯಕ್ಷಎಚ್‌ಎನ್ ಅಂಬಿಗ, ಶಿಬಿರ ಸಂಯೋಜಕಡಾಗಣಪತಿ ಭಟ್ಟ, ಶಿಬಿರಾಧಿಕಾರಿ ಸುವರ್ಣಾ ಮಂಜ ಭಟ್ಟ ಮುಂತಾದವರು ವೇದಿಕೆಯಲ್ಲಿದ್ದರು.ಶಿಬಿರಾರ್ಥಿಗಳಾದ ಸಂಪೂರ್ಣ ಸ್ವಾಗತಿಸಿದನು.ನಾಗಶ್ರಿಯಾ, ಶುಭದಾ ಪರಿಚಯಿಸಿದರು.ಗೌತಮ ವಂದಿಸಿದನು.ಜೀವನಕಾಕಡೆಕಾರ್ಯಕ್ರಮ ನಿರ್ವಹಿಸಿದನು.

ಅದೇ ಸಂದರ್ಭದಲ್ಲಿ ಶಿಬಿರ ಶಿಕ್ಷಕರಾದ ಡಾಗಣಪತಿ ಭಟ್ಟ, ಸುವರ್ಣಾದೇಸಾಯಿ, ಸುವರ್ಣಾ ಭಟ್ಟ, ರವೀಂದ್ರ ಹಾಳಿಜೋಳ, ಸುಮಂಗಲಾ ಭಟ್ಟರನ್ನುಧಾರವಾಡದ ಶೈಲಾ ಆರ್ ಬಿರಾದಾರ ದಂಪತಿಗಳು ಗೌರವಿಸಿದರು.ಸಾಕೇತ ಜೋಗಳೇಕರ ಮತ್ತು ಸೃಜನಾ ಬಿರಾದಾರಆದರ್ಶ ಶಿಬಿರಾರ್ಥಿಗಳಾಗಿ ಹೊರಹೊಮ್ಮಿದರು.

Back to top button