ಕುಮಟಾ: ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ, ಕುಮಟಾ ದಲ್ಲಿ ಮಹಿಳಾ ಸಬಲೀಕರಣ ಘಟಕದ ಅಡಿಯಲ್ಲಿ “ಮಹಿಳೆ ಮತ್ತು ಕಾನೂನು” ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಮಟಾದ ಜನಪ್ರಿಯ ವಕೀಲೆಯಾದ, ಶ್ರೀಮತಿ ಮಮತಾ ನಾಯ್ಕ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಇವರು ಹದಿಹರೆಯದ ಮಕ್ಕಳ ಮನಸ್ಸಿನಲ್ಲಾಗುತ್ತಿರುವ ವಿಚಾರಗಳಲ್ಲಿನ ಬದಲಾವಣೆ, ಹೆಣ್ಣನ್ನು ಇಂದು ಸಮಾಜ ನೋಡುತ್ತಿರುವ ರೀತಿ ಹಾಗೂ ಮಕ್ಕಳಲ್ಲಿ ಬೆಳೆಯುತ್ತಿರುವ ವಿಕಾರ ಚಿಂತನೆಗಳ ಕುರಿತು ಕೆಲವು ನೈಜ ಸಂಗತಿಗಳನ್ನು ದೃಷ್ಟಾಂತದೊoದಿಗೆ ಮಾತನಾಡಿದರು. ಮಾನವೀಯ ಮೌಲ್ಯ ಶಿಕ್ಷಣದ ಮೂಲಕ ಉನ್ನತೀಕರಣಗೊಳ್ಳಬೇಕೆಂದು ಹೇಳಿದರು.
ಅದೇ ರೀತಿ, ರಾಷ್ಟçದ ಬೆಳವಣಿಗೆಗೆ, ಅಭ್ಯುದಯಕ್ಕೆ ಕಾರಣಳಾಗಬೇಕಿದ್ದ ಹೆಣ್ಣು ಇಂದು ಶೋಷಣೆಯನ್ನು ಅನುಭವಿಸುತ್ತಿರುವುದು ನಿಜಕ್ಕೂ ಶೋಚನೀಯ ಸ್ಥಿತಿ ಹಾಗೂ ನಶಿಸುತ್ತಿರುವ ಮಾನವೀಯತೆಯೇ ಇಂದು ಹೆಣ್ಣಿನ ಸ್ಥಾನ-ಮಾನ ಕೆಳಗಿಳಿಯಲು ಕಾರಣವಾಗುತ್ತಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ, ಕುಮಟಾದ ಪ್ರಾಂಶುಪಾಲರಾದ ಡಾ. ಪ್ರೀತಿ ಪಿ. ಭಂಡಾರಕರರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ, ಪ್ರಥ್ವಿ ಹೆಗಡೆ ಪ್ರಾರ್ಥಿಸಿದರು, ಉಪನ್ಯಾಸಕಿಯಾದ ಡಾ. ರೋಸಿ ಫರ್ನಾಂಡಿಸ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.