Follow Us On

WhatsApp Group
Important
Trending

ಉತ್ತರಕನ್ನಡ ಎರಡು ಶೈಕ್ಷಣಿಕ ಜಿಲ್ಲೆಯ 7 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್: ಪೇಂಟರ್ ಮಗಳು ರಾಜ್ಯಕ್ಕೆ ದ್ವಿತೀಯ

ಯಾವ ತಾಲೂಕಿನ ಯಾರ್ಯಾರು ಈ ಸಾಧನೆ ಮಾಡಿದ್ದಾರೆ ನೋಡಿ?

ಕಾರವಾರ: ಎಸ್‌ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಸುದ್ದಿಗೋಷ್ಠಿ ಫಲಿತಾಂಶದ ವಿವರ ನೀಡಿದರು. ಈ ಬಾರಿ ಶೇಕಡಾ 85.63ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಕಳೆದ 10 ವರ್ಷದಲ್ಲೇ ಅತಿಹೆಚ್ಚು ಫಲಿತಾಂಶ ದಾಖಲಾಗಿದೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ©Copyright reserved by Vismaya tv

ಉತ್ತರಕನ್ನಡದ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ625 ಅಂಕ ಪಡೆದು ರಾಜ್ಯಕ್ಕೆ ಟಾಫರ್ ಆಗಿ ಹೊರ ಹೊಮ್ಮಿದ್ದಾರೆ. ಕುಮಟಾ ಕಲಭಾಗದ ಸಿವಿಎಸ್ ಕೆ ಹೈಸ್ಕೂಲ್ ನ ಮೂವರು ವಿದ್ಯಾರ್ಥಿಗಳಾದ ಮೇಘನಾ ವಿಷ್ಣು ಭಟ್, ಕಾರ್ತಿಕ್ ಭಟ್, ದೀಕ್ಷಾ ನಾಯ್ಕ ಹಾಗೂ ಶಿರಸಿ ಸೇಂಟ್ ಅಂಥೋನಿ ಹೈಸ್ಕೂಲ್ ನ ಸರ್ಮಿನಾ ಶೇಖ್,  ಸರ್ಕಾರಿ ಮಾರಿಕಾಂಬಾ ಪಿ.ಯು ಕಾಲೇಜ್ ನ ಚಿರಾಜ್ ಮಹೇಶ್ ನಾಯ್ಕ ಹಾಗೂ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಕನ್ನಿಕಾ ಪರಮೇಶ್ವರಿ ಹೆಗಡೆ ಈ ಸಾಧನೆ ಮಾಡಿದ್ದಾರೆ.

ಪೇಂಟರ್ ಮಗಳು ರಾಜ್ಯಕ್ಕೆ ದ್ವಿತೀಯ

ಶಿರಸಿ: ಶಿರಸಿ: ಮಾರಿಕಾಂಬಾ ಸರಕಾರಿ ಪ್ರೌಢಶಾಲೆಗೆ ರಾಜ್ಯಕ್ಕೆ ಮೊದಲ ಎರಡು ಸ್ಥಾನ ಬಂದಿದೆ. ಚಿರಾಗ ಮಹೇಶ ನಾಯ್ಕ ಪ್ರಥಮ ಸ್ಥಾನಗಳಿಸಿದ್ದಾನೆ. ಚಿರಾಗ ಮಹೇಶ ನಾಯ್ಕ 625 ಕ್ಕೆ 625 ಅಂಕ ಪಡೆದು ಸಾಧನೆ ತೋರಿದ್ದಾನೆ. ಚಿರಾಗ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದ ಮಹೇಶ ನಾಯ್ಕ ಮತ್ತು ಹೇಮಾವತಿ ನಾಯ್ಕ ಅವರ ಪುತ್ರನಾಗಿದ್ದಾನೆ. ©Copyright reserved by Vismaya tv

ಇನ್ನು ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಕ್ಷಾ ರಾಜು ನಾಯ್ಕ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ದೀಕ್ಷಾ ಅವರ ತಂದೆ ರಾಜು ನಾಯ್ಕ ಪೇಂಟರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ 

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button