Important
Trending

ಹೋಮ್ ನರ್ಸಿಂಗ್  ಕೆಲಸಕ್ಕೆಂದು ತೆರಳಿದ್ದ ಯುವತಿಯ ಅಪಹರಣ? ತಂದೆ ಹೇಳಿದ್ದೇನು ನೋಡಿ?

ಪೋನ್ ಮಾಡಿದರೆ ಸ್ವಿಚ್ ಆಫ್:ಯಾವುದೇ ಮಾಹಿತಿ ಇಲ್ಲ

ಅಂಕೋಲಾ: ಮನೆಯಿಂದ ಬೆಂಗಳೂರಿಗೆ ಹೋಮ್ ನರ್ಸಿಂಗ್  ಕೆಲಸಕ್ಕೆಂದು ತೆರಳಿದ್ದ ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು (ಬಾಲಕಿಯ ) ತಂದೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.  ತಾಲೂಕಿನ ರಾಮನಗುಳಿ, ಹಳವಳ್ಳಿಯ ಮಳಲಗಾಂವನ 17 ವರ್ಷ 10 ತಿಂಗಳು ವಯಸ್ಸಿನ ಬಾಲಕಿ ಬೆಂಗಳೂರಿಗೆ ಹೋಮ್ ನರ್ಸಿಂಗ್ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಸೆಪ್ಟೆಂಬರ್ 2 ರಂದು ಯಲ್ಲಾಪುರ ಬಸ್ ಹತ್ತಿ ತೆರಳಿದ್ದು ಸ್ವಲ್ಪ ದಿನಗಳ ನಂತರ ಅವಳ ಮೊಬೈಲ್ ಸಂಖ್ಯೆಗೆ ಪೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದ್ದು ಅವಳ ಗೆಳತಿಯರಲ್ಲಿ ಮತ್ತು ಸಂಬಂಧಿಗಳಲ್ಲಿ ವಿಚಾರಣೆ ನಡೆಸಿದರೆ ಅವಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು

ಈ ಕುರಿತಂತೆ ಬಾಲಕಿಯ ತಂದೆ ಹಳವಳ್ಳಿ ಮಳಲಗಾಂವ ನಿವಾಸಿ   ತಮ್ಮ ಮಗಳನ್ನು ಅಪಹರಣ ಮಾಡಲಾಗಿದ್ದು ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾರೆ.  ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಈ ಪ್ರಕರಣದಲ್ಲಿ ಬಾಲಕಿಯ ಅಪಹರಣವಾಗಿರಬಹುದೇ?  ಇಲ್ಲದೇ ಬಾಲಕಿಯೇ ಯಾವುದಾದರೂ ಬೇರೆ ಕಾರಣದಿಂದ ಯಾರ ಜೊತೆಯಾದರೂ ಹೋಗಿರಬಹುದೇ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಂತಿದ್ದು,ಪೊಲೀಸ್ ತನಿಖೆ ಬಳಿಕ ಸತ್ಯಾಂಶ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

land for sale

Back to top button