ಹೊನ್ನಾವರ: ತಾಲೂಕಿನ ಕವಲಕ್ಕಿ ಶ್ರೀ ಭಾರತೀ ಪ್ರೌಢಶಾಲೆಯ ಸುಕೃತಾ ಎಸ್. ಭಟ್ 624 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್.ಕೆ.ಪಿ ಅರೇಅಂಗಡಿ ವಿಭಾ ವಿನಾಯಕ ಭಟ್, ಮತ್ತು ಸಂಶಿ ಶಾರದಾಂಬ ಪ್ರೌಢಶಾಲೆ ಅನನ್ಯ ಸುಬ್ರಹ್ಮಣ್ಯ ಹೆಗಡೆ 622 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ, ಸರಕಾರಿ ಪ್ರೌಢಶಾಲೆ ಹಡಿನಬಾಳ ಬಿ.ವಿ.ನಿಸರ್ಗ 621 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ,
ಸರಕಾರಿ ಪ್ರೌಡ ಶಾಲೆ ಇಡಗುಂಜಿಯ ಸುಚಿತ್ರ ಕೃಷ್ಣ ನಾಯ್ಕ, ಮತ್ತು ಹೊನ್ನಾವರ ಮಾರ್ಥೊಮಾ ಆಂಗ್ಲ ಮಾಧ್ಯಮ ಶಾಲೆಯ ಆದರ್ಶ ಗಣಪತಿ ಹೆಗಡೆ, ನ್ಯೂ ಇಂಗ್ಲೀಷ್ ಸ್ಕೂಲ್ ಸೃಜನ್ ಭಂಡಾರಿ, 620 ಅಂಕಗಳಿಸಿದ್ದಾರೆ, ಎಸ್.ಕೆ.ಪಿ. ಅರೇಅಂಗಡಿ ಮಲ್ಲಿಕಾ ಗಿರೀಶ ಹೆಗಡೆ, ಕರಾವಳಿ ಪ್ರೌಡಶಾಲೆ ಗುಣವಂತೆಯ ಸಿಂಚನಾ ಶೆಟ್ಟಿ, ಎಸ್.ಎಫ್.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಟೆಪಿ ಸಾವೆರ್ ಮಿರಿಂಡಾ, ಹಾಗೂ ಶಿವಾನಿ ಎಸ್. ಶೇಟ್ 619 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ
ತಾಲೂಕಿನ ಕವಲಕ್ಕಿಯ ಶ್ರೀ ಭಾರತೀಆಂಗ್ಲ ಮಾಧ್ಯಮ ಶಾಲೆಯಲ್ಲಿ 21 ಬಾಲಕರು 19 ಬಾಲಕಿಯರು ಸೇರಿ ಒಟ್ಟು 40 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಿದ್ದರು. ಕುಮಾರಿ ಸುಕೃತಾ ಎಸ್. ಭಟ್ 625 ಕ್ಕೆ 624 ಅಂಕಗಳನ್ನು ಗಳಿಸಿರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿರುವುದು ನಮ್ಮ ಶಾಲೆಯ ಹೆಗ್ಗಳಿಕೆ. ಮತ್ತು ಕುಮಾರಿ ಶೃದ್ಧಾ ಶಂಭು ಭಟ್ಟರಾಜ್ಯಕ್ಕೆ 9 ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿರುತ್ತಾಳೆ. ಮತ್ತು ಉಳಿದ 38 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ , 6 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿತಂದಿರುತ್ತಾರೆ. ಶಾಲೆಯು 100 ಕ್ಕೆ 100 ಗಳಿಸಿರುತ್ತದೆ ಮತ್ತು’ಎ’ ಗ್ರೇಡ್ ನ್ನು ಪಡೆದಿದೆ. ವಿದ್ಯಾರ್ಥಿಗಳನ್ನು ಮತ್ತು ತರಬೇತಿ ಮಾಡಿದ ಶಿಕ್ಷಕರನ್ನು ಶ್ರೀ ಭಾರತಿ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
ಹೊನ್ನಾವರ ತಾಲೂಕಿನ ವಿವಿಧ ಪ್ರೌಢಶಾಲೆಗಳ ಫಲಿತಾಂಶ ಹೀಗಿದೆ
ಪ್ರಭಾತನಗರದ ಸರಕಾರಿ ಪ್ರೌಢಶಾಲೆ ಶೇ 87.23 ,
ಹಡಿನಬಾಳದ ಸರಕಾರಿ ಪ್ರೌಢಶಾಲೆ ಶೇ.100,
ಕೋಟೇಬೈಲ್‌ದ ಸರಕಾರಿ ಪ್ರೌಢಶಾಲೆ ಶೇ.95.65 ,
ಜಲವಳ ಕರ್ಕಿಯ ಸರಕಾರಿ ಪ್ರೌಢಶಾಲೆ ಶೇ. ,100
ಅಳ್ಳಂಕಿಯ ಸರಕಾರಿ ಪ್ರೌಢಶಾಲೆ ಶೇ. 86.84,
ಗೇರಸೊಪ್ಪದ ಸರಕಾರಿ ಪ್ರೌಢಶಾಲೆ ಶೇ. 90.48,
ಇಡಗುಂಜಿಯ ಸರಕಾರಿ ಪ್ರೌಢಶಾಲೆ ಶೇ.96.83,
ಮಂಕಿಯ ಸರಕಾರಿ ಪ್ರೌಢಶಾಲೆ ಶೇ.94.03,
ಬಣಸಾಲೆಯ ಸರಕಾರಿ ಪ್ರೌಢಶಾಲೆ ಶೇ. 87.50,
ಚಿತ್ತಾರದ ಸರಕಾರಿ ಪ್ರೌಢಶಾಲೆ ಶೇ.93.88 ,
ಹೊದ್ಕೆಶಿರೂರಿನ ಸರಕಾರಿ ಪ್ರೌಢಶಾಲೆ ಶೇ. 88.46,
ಅನುದಾನಿತ ಶಾಲೆಗಳಲ್ಲಿ
ಕಡತೋಕದ ಜನತಾ ವಿದ್ಯಾಲಯ ಶೇ.85.92 ,
ಕಾಸರಕೋಡದ ಜನತಾ ವಿದ್ಯಾಲಯ ಶೇ. 96.00,
ಅನಿಲಗೋಡದ ಜನತಾ ವಿದ್ಯಾಲಯ ಶೇ.100
ಹೊನ್ನಾವರದ ಸೇಂಟ್ ಥಾಮಸ್ ಪ್ರೌಢಶಾಲೆ ಶೇ. 74.67,
ಹೊನ್ನಾವರದ ಸೇಂಟ್ ಅಂತೋನಿ ಪ್ರೌಢಶಾಲೆ ಶೇ. ,
ಹೊನ್ನಾವರದ ನ್ಯೂ ಇಂಗ್ಲೀಷ ಸ್ಕೂಲ್ (ಕನ್ನಡ) ಶೇ. 89.52,
ಹೊನ್ನಾವರ ಹೋಲಿರೋಸರಿ ಕಾನ್ವೆಂಟ್ ಶೇ. 90.41,
ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆ ಶೇ. 76.67,
ಹಳದೀಪುರದ ಆರ್.ಇ.ಎಸ್. ಪ್ರೌಢಶಾಲೆ ಶೇ. 67.31,
ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆ ಶೇ.92.19,
ಖರ್ವಾದ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಶೇ.95.00 ,
ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ.ಪೂ ಕಾಲೇಜ ಶೇ. 85.71 ,
ಕರ್ಕಿಯ ಶ್ರೀ ಚನ್ನಕೇಶವ ಪ್ರೌಢಶಾಲೆ ಶೇ.88.51 ,
ಅರೇಅಂಗಡಿಯ ಎಸ್.ಕೆ.ಪಿ. ಪ್ರೌಢಶಾಲೆ ಶೇ. 92.59
ಮಾಗೋಡದ ಶಾರದಾಂಬಾ ಸಂಶಿ ಶೇ.58.78 ,
ಹೊಸಾಡದ ಶರಾವತಿ ಪ್ರೌಢಶಾಲೆ ಶೇ.93.55 ,
ಗುಣವಂತೆಯ ಕರಾವಳಿ ಪ್ರೌಢಶಾಲೆ ಶೇ.98.25 ,
ಅನುದಾನ ರಹಿತ ಪ್ರೌಢಶಾಲೆಗಳಲ್ಲಿ
ಕವಲಕ್ಕಿಯ ಶ್ರೀ ಭಾರತಿ ಪ್ರೌಢಶಾಲೆ ಶೇ. 100,
ಹೊನ್ನಾವರದ ನ್ಯೂ ಇಂಗ್ಲೀಷ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ. 100,
ಹೊನ್ನಾವರದ ಮಾರ್ಥೋಮಾ ಪ್ರೌಢಶಾಲೆ ಶೇ.97.62 ,
ಮಾವಿನಕುರ್ವಾದ ಸ್ವಾಮಿ ವಿವೇಕಾನಂದ ಶೇ. 83.33,
ಕಾಸರಕೋಡದ ಮಝರೆಲ್ಲೋ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ. 86.21,
ಕೊಡಾಣಿಯ ಎಸ್ ಎಫ್.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.100 ,
ಕರ್ಕಿಯ ದಯಾನಂದ ಗುರುಕುಲ ಪ್ರೌಢಶಾಲೆ ಶೇ.92.31 ,
ಜ್ಞಾನೇಶ್ವರಿ ವಿದ್ಯಾಲಯ ಕರ್ಕಿ ಶೇ.100,
ಸಿದ್ದಿವಿನಾಯಕ ಪ್ರೌಡಶಾಲೆ ಅನುದಾನ ರಹಿತ ಶೇ 89.47, ಎಲ್. ಮುನಿನಾಥ್ ಮಂಕಿ ಶೇ. 100, ಅಲ್.ಇಲಾಲ್ ಪ್ರೌಡಶಾಲೆ ಮಂಕಿ ಶೇ. 93.75, ಅ.ಸಿ.ಸ್ಸಿ ಆಂಗ್ಲ ಮಾಧ್ಯಮ ಪ್ರೌಡಶಾಲೆ ಶೇ. 100, ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ರೆಸಿಡೆನ್ಸಿಯಲ್ ಶಾಲೆ ಮಂಕಿ ಶೇ. 95.24, ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಅಳ್ಳಂಕಿ ಶೇ. 100 ಸಾಧನೆ ಮಾಡಿದ್ದಾರೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಹೆಗಡೆ ಮಾಹಿತಿ ನೀಡಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ