Follow Us On

WhatsApp Group
Focus News
Trending

ಹಿರೇಗುತ್ತಿ ಹೈಸ್ಕೂಲಿನಲ್ಲಿ ದೇವಾಂಗಿನಿ ನಾಯಕರ ಬಿಳ್ಕೋಡುಗೆ ಸಮಾರಂಭ

ಗೋಕರ್ಣ: ಸಮೀಪದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಕಳೆದ 33 ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಳಾದ ದೇವಾಂಗಿನಿ ಉದ್ದಂಡ ನಾಯಕರ ಬಿಳ್ಕೋಡುವಿಕೆ ಸಮಾರಂಭ ಜರುಗಿತು. ದೇವಾಂಗಿನಿ ಉದ್ದಂಡ ನಾಯಕರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದದವರು, ಯುವಕ ಸಂಘದವರು, ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು.

ಸನ್ಮಾನಿತರಾಗಿ ಮಾತನಾಡಿದ ದೇವಾಂಗಿನಿ ನಾಯಕರು ಹಿರೇಗುತ್ತಿ ಹೈಸ್ಕೂಲಿನಲ್ಲಿ ಕಾರ್ಯನಿರ್ವಹಿಸಲು ಸಹಾಯ ಸಹಕಾರ ನೀಡಿದ ತಮ್ಮ ತಂದೆ-ತಾಯಿರವರಿಗೆ, ಶಾಲಾ ಆಡಳಿತ ಮಂಡಳಿರವರಿಗೆ, ಮುಖ್ಯಾಧ್ಯಾಪಕರಿಗೆ,, ಶಿಕ್ಷಕವೃಂದದವರಿಗೆ, ಸಿಬ್ಬಂದಿಗಳಿಗೆ, ಹಿರೇಗುತ್ತಿಯ ಬ್ರಹ್ಮಜಟಕ ಯುವಕ ಸಂಘದವರಿಗೆ, ಊರ ನಾಗರಿಕರಿಗೆ ಧನ್ಯವಾದ ಸಮರ್ಪಿಸಿ, ವಿದ್ಯಾರ್ಥಿ ವೃಂದದವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾತ್ಮಗಾಂಧಿ ವಿಧ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ, “ದೇವಾಂಗಿನಿ ನಾಯಕರವರು ತಮ್ಮ ಸೇವಾ ಅವಧಿಯಲ್ಲಿ ಶಾಲೆಯ ಪಠ್ಯೇತರ ಚಟುವಟಿಕೆಗಳ ಪ್ರಗತಿಯ ಜೊತೆಗೆ ಶಾಲೆಯ ಶ್ರೇಯೋಭಿವೃಧ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಇವರ ನಿವೃತ್ತಿ ಜೀವನ ಇನ್ನಷ್ಟು ಕ್ರೀಯಾಶೀಲವಾಗಿರಲೆಂದು ಶುಭ ಹಾರೈಸಿದರು.”
ಕಾರ್ಯದರ್ಶಿ ಮೋಹನ. ಬಿ. ಕೆರೆಮನೆಯವರು “ಪಾಠ ಹೇಳುವ ಶಿಕ್ಷಕರು ತೆರೆಯ ಮುಂದೆ ಕಾರ್ಯನಿರ್ವಹಿಸುತ್ತಾ ತೆರೆಯ ಹಿಂದೆ ಕಾಯಕ ಯೋಗಿಯಂತೆ ದುಡಿಯುತ್ತಾ ಸೇವೆಗೈದವರನ್ನು ಕೆಲವೂಮ್ಮೆ ನಾವು ಗಮನಿಸಿರುವುದೇ ಇಲ್ಲ. ಅಂತವರಲ್ಲೊಬ್ಬರು ದೇವಾಂಗಿನಿ ನಾಯಕ” ಎಂದರು.

ಎನ್.ಟಿ ನಾಯಕರವರು ಮಾತನಾಡಿ “ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳು ಇಂದೂ – ಎಂದೂ ದೇವಾಂಗಿನಿ ನಾಯಕರವರ ಸಹಕಾರ ಗುಣವನ್ನು ನೆನಪಿಸುತ್ತಾರೆ” ಎಂದರು. ಮುಖ್ಯಾಧ್ಯಾಪಕ ರೋಹಿದಾಸ. ಎಸ್. ಗಾಂವಕರ ಮಾತನಾಡಿ “ಸ್ವಭಾವದಿಂದ ಗಂಭೀರವಾಗಿ ಕಂಡರೂ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುತ್ತಾ ಹೈಸ್ಕೂಲಿನ ಎಲ್ಲಾ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿ ತೊಡಗಿಕೊಂಡು ಶಿಕ್ಷಕರ ಪ್ರೀತಿ ಗೌರವಗಳಿಗೆ ಭಾಜನರಾಗಿ ಇಂದು ನಿವೃತ್ತಿಯಾಗುತ್ತಿರುವ ದೇವಾಂಗಿನಿ ನಾಯಕರ ವಿಶ್ರಾಂತ ಬದುಕು ನೆಮ್ಮದಿಗಳಿಂದ ತುಂಬಿರಲಿ” ಎಂದರು.
ಉದ್ದಂಡ ಬಿ ಗಾಂವಕರವರು ಮಾತನಾಡಿ “ದೇವಾಂಗಿನಿ ನಾಯಕರವರ ಬದುಕು ಹಾಗೂ ಅನುಭವಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿರಲಿ ಎಂದು ಹೃದಯ ಪೂರ್ವಕವಾಗಿ ಹಾರೈಸಿದರು”.

ಹಿರೇಗುತ್ತಿ ಪದವಿಪೂರ್ವ ಕಾಲೇಜ್ ಪ್ರಿನ್ಸಿಪಾಲ್ ಪ್ರೇಮಾನಂದ ಎಚ್ ಗಾಂವಕರ ಮಾತನಾಡಿ “ಶಿಕ್ಷಣ ಇಲಾಖೆಯೊಂದಿಗೆ ವಿದ್ಯಾರ್ಥಿಗಳೊಂದಿಗೆ ಅವರ ಸೌಹಾರ್ದತೆ ಕಾರ್ಯ ಒಡನಾಡಿಗಳು ಜನಮನ್ನಣೆ ಗಳಿಸಿದ್ದವು. ಹಾಗೆಯೇ ಕುಟುಂಬದಲ್ಲಿಯೂ ಇವರು ಓರ್ವ ಆದರ್ಶ ಭಾರತೀಯ ಸ್ರೀ” ಎಂದರು. ಶಿಕ್ಷಕ ವಿಶ್ವನಾಥ ಬೇವಿನಕಟ್ಟಿ ಮಾತನಾಡಿ ದೇವಾಂಗಿನಿ ನಾಯಕರ ಕೆಲಸ ಮಾಡುವ ರೀತಿ, ಚಾಕಚಕ್ಯತೆ, ದೃಢಸಂಕಲ್ಪ ಇವರಿಗೆ ರಕ್ತಗತವಾಗಿ ಬಂದಿದೆ.ಅವರ ವಿಶ್ರಾಂತಿ ಜೀವನ ಶುಭದಾಯಕವಾಗಲಿ ಎಂದರು.

ಕಾರ್ಯಕ್ರಮದಲ್ಲಿ ಆಡಳಿತ ಕಮಿಟಿಯ ಶ್ರೀಕಾಂತ ನಾಯಕ, ರಮಾನಂದ ಪಟಗಾರ, ಪರಮೇಶ್ವರ ನಾಯ್ಕ, ರಾಮು ಕೆಂಚನ್, ರಾಜು ಕೇ ಗಾಂವಕರ, ಸಣ್ಣಪ್ಪ ಆರ್ ನಾಯಕ, ಹರೀಶ ನಾಯಕ, ಪಪ್ಪು ನಾಯಕ, ಶಿಕ್ಷಕರಾದ ನಾಗರಾಜ ಜಿ. ನಾಯಕ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಕವಿತಾ ದಿವಗಿ, ಸುಮನ್ ಫರ್ನಾಂಡೀಸ್, ವಸಂತಬಾಯಿ, ಜಯಶ್ರೀ ಪಟಗಾರ, ತನುಜಾ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು. ನಾಗಶ್ರೀ ಸಂಗಡಿಗರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿನಿ ಕಾಂಚಿಕಾ ನಾಯಕ ಪರಿಚಯ ಭಾಷಣ ಮಾಡಿದರು. ಎನ್. ರಾಮು ಹಿರೇಗುತ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಹಾದೇವ ಗೌಡ ವಂದಿಸಿದರು.

Back to top button