Focus News
Trending

ನಾಲ್ಕು ತಿಂಗಳು ಕಳೆದರೂ ರಾಜ್ಯ ಸರ್ಕಾರ ಲೋಕಾಯುಕ್ತರನ್ನು ನೇಮಕ ಮಾಡದೇ ಇರುವುದು ಅತ್ಯಂತ ವಿಷಾದಕರ: ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ

ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನವು ತೆರವಾಗಿ ನಾಲ್ಕು ತಿಂಗಳು ಗತಿಸಿದರೂ ಈತನಕ ರಾಜ್ಯ ಸರ್ಕಾರ ಲೋಕಾಯುಕ್ತರನ್ನು ನೇಮಕ ಮಾಡದೇ ಇರುವುದು ಅತ್ಯಂತ ವಿಷಾದಕರ. ಒಂದು ತಿಂಗಳೋಳಗಾಗಿ ಲೋಕಾಯುಕ್ತಕ್ಕೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಆಗ್ರಹಿಸಿದ್ದಾರೆ.

ಲೋಕಾಯುಕ್ತರ ಸ್ಥಾನ ತೆರವಾಗುವ ಮುನ್ನವೇ ಆ ಸ್ಥಾನಕ್ಕಾಗಿ ನೂತನ ಆಯುಕ್ತರನ್ನು ನೇಮಕ ಮಾಡುವುದು ಆಡಳಿತದ ಶಿಷ್ಠಾಚಾರವಾಗಿತ್ತು. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಲೋಕಾಯುಕ್ತಕ್ಕೆ ನ್ಯಾಯಮೂರ್ತಿಗಳನ್ನು ಒಂದು ತಿಂಗಳಲ್ಲಿ ನೇಮಕ ಮಾಡಬೇಕು. ಎಸಿಬಿಯನ್ನು (ಬ್ರಷ್ಟಾಚಾರ ನಿಗ್ರಹದಳ) ರದ್ದುಪಡಿಸಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಶಕ್ತಿಯನ್ನು ನೀಡಬೇಕು. ಬ್ರಷ್ಟಾಚಾರವೆಂಬುದು ನಾಗರಿಕಗತೆ ಪ್ರಾರಂಭವಾದಾಗಿನಿoದಲೇ ಜನ್ಮ ತಾಳಿದೆ ಮತ್ತು ಬ್ರಷ್ಟಾಚಾರವಿಲ್ಲದ ಸ್ಥಳವಿಲ್ಲ. ಬ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ 80ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ, ಮೌಲ್ಯಾಧಾರಿತ ರಾಜಕಾರಿಣಿ ರಾಮಕೃಷ್ಣ ಹೆಗಡೆಯವರು ಲೋಕಾಯುಕ್ತ ಸಂಸ್ಥೆಯನ್ನು ಹುಟ್ಟುಹಾಕಿದರು. ಇಂದು ಈ ಸಂಸ್ಥೆಯನ್ನು ಮುಚ್ಚಿ ಹಾಕಲು ಯಾವುದೇ ರಾಜಕೀಯ ಪಕ್ಷವಾಗಲೀ, ಆಡಳಿತ ಪಕ್ಷವಾಗಲೀ ಹುನ್ನಾರ ನಡೆಸಿದರೆ ಅದರ ಕಹಿಫಲವನ್ನು ಆ ಪಕ್ಷ ಅನುಭವಿಸಲೇಬೇಕಾಗುತ್ತದೆ. ನಾಡಿನಲ್ಲಿ ಅರಾಜಕತೆ, ಬ್ರಷ್ಟಾಚಾರ, ಲಂಚಾವತಾರ ತಾಂಡವ ನೃತ್ಯಗಯ್ಯುವುದರಲ್ಲಿ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ನಾಡಿನ ಪ್ರಜ್ಞಾವಂತ ನಾಗರಿಕರು ದಂಗೆ ಏಳುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ದೇವರಾಜ ಅರಸು ವಿಚಾರವೇದಿಕೆ ಉಗ್ರ ಹೋರಾಟಕ್ಕೂ ಬದ್ಧವಾಗಿದೆ.

ರಾಮ ರಾಜ್ಯ ಸಾಕಾರಕ್ಕಾಗಿ, ಅಚ್ಛೇದಿನಕ್ಕಾಗಿ, ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಕೂಡಲೇ ಲೋಕಾಯುಕ್ತಕ್ಕೆ ಸೂಕ್ತ ನಿವೃತ್ತ ನ್ಯಾಧೀಶರನ್ನು ನೇಮಕ ಮಾಡಬೇಕು. ಎಸಿಬಿ ಯನ್ನು ರದ್ದುಪಡಿಸಿ ಬ್ರಷ್ಟಾಚಾರ ತಡೆಗಟ್ಟುವಲ್ಲಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಶಕ್ತಿ ತುಂಬಬೇಕಾಗಿ ವಿನಂತಿ. ನಮ್ಮ ಜಿಲ್ಲೆಯ ನೇತಾರರು, ರಾಷ್ಟಿçÃಯ ನಾಯಕರು ಆದ ರಾಮಕೃಷ್ಣ ಹೆಗಡೆ ಅವರು ಕಟ್ಟಿದ ಲೋಕಾಯುಕ್ತ ಸಂಸ್ಥೆಯನ್ನು ಜೀವಂತ ಉಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ.

ಲಿಖಿತ ಮನವಿಯನ್ನು ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅವಗಹನೆಗಾಗಿ ಯಥಾ ಪ್ರತಿಯನ್ನು ಮತ್ತು ಲೋಕಾಯುಕ್ತ ಕುರಿತು ಮಾಧ್ಯಮದಲ್ಲಿ ಪ್ರಕಟಗೊಂಡ ದಾಖಲೆಗಳನ್ನೂ ಲಗತ್ತಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button