Follow Us On

WhatsApp Group
Important
Trending

ನಕಲಿ Loan App ಗಳ ಬಗ್ಗೆ ಹುಷಾರ್! ಬರುತ್ತೆ ಚಾರಿತ್ರ್ಯ ಹರಣವಾಗುವ ಸಂದೇಶ: ಪೊಲೀಸ್ ಪ್ರಕಟನೆಯಲ್ಲಿ ಏನಿದೆ ನೋಡಿ?

ಸೈಬರ್ ವಂಚಕರು ಬಲೆ ಬೀಸೋದು ಹೇಗೆ ?

ಕಾರವಾರ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ Loan App ಮುಖಾಂತರ ಸಾಲಕೊಡುವ ಸೈಬರ್‌ ವಂಚಕರ ಜಾಲವು ಸಾಕಷ್ಟು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ರಾಜ್ಯದ ಸಾಕಷ್ಟು ಜನ ಸಾರ್ವಜನಿಕರು ಲಕ್ಷಾಂತರ ರೂಪಾಯಿ ಹಣಕ್ಕೆ ಮೋಸಹೋಗಿ ಮಾನಸಿಕವಾಗಿ ತೊಂದರೆಗೊಳಪಡುತ್ತಿರುವ ಬಗ್ಗೆ ದೂರುಗಳು ದಾಖಲಾಗುತ್ತಿವೆ.

ಸೈಬರ ವಂಚಕರ ಕಾರ್ಯವಿಧಾನ: ಸೈಬರ್‌ ವಂಚಕರು ಸಾರ್ವಜನಿಕರಿಗೆ ತಾವು Loan App ಮುಖಾಂತರ ತ್ವರಿತಗತಿಯಲ್ಲಿ ಸಾಲ ನೀಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತನ್ನು ನೀಡುವ ಮೂಲಕ ಆಸೆ. ಆಮೀಷಗಳನ್ನು ಒಡ್ಡುತ್ತಿದ್ದು, ಇದನ್ನು ನಿಜವೆಂದು ನಂಬಿದ ಜನರು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ನೂರಾರು Loan App ಗಳಲ್ಲಿ ಯಾರಾದರೂ ಅದನ್ನು ತಮ್ಮ ಮೊಬೈಲನಲ್ಲಿ ಡೌನಲೋಡ ಮಾಡಿಕೊಂಡರೆ ಅವರ ಮೊಬೈಲನಲ್ಲಿರುವ Personal Data ( ಮೊಬೈಲ್ ಕಾಂಟೆಕ್ಸ್ ಡಿಟೇಲ್ಸ್, ಪೋಟೋ, ವಿಡಿಯೋ, ಫೇಸ್‌ಬುಕ್/ವಾಟ್ಸ್ಆಪ್/ಇನ್ಯಾಗ್ರಾಮ ಇತ್ಯಾದಿ ) ಎಲ್ಲವೂ ವಂಚಕರ ಕೈ ಸೇರುತ್ತದೆ. ವಂಚಕರು ಒಂದು ವಾರದ ಮಟ್ಟಿಗೆ ಸಾಲವನ್ನು ನೀಡುವ ಬಗ್ಗೆ ಹೇಳಿ ಅತ್ಯಧಿಕ ಮಟ್ಟದ ಬಡ್ಡಿಯನ್ನು ವಸೂಲು ಮಾಡುತ್ತಾರೆ.

ಒಂದು ವೇಳೆ ಸಾಲವನ್ನು ನಿಗದಿತ ಸಮಯದಲ್ಲಿ ಭರಣ ಮಾಡಿದರೂ ಸಹಾ ಪುನ: ಹಣದ ಬೇಡಿಕೆ ಇಟ್ಟು, ಅದನ್ನು ನೀಡದೇ ಇದ್ದರೆ ನಮ್ಮ ಮೊಬೈಲನಿಂದ ಈಗಾಗಲೇ ಕಳ್ಳತನ ಮಾಡಿರುವ Personal Data ಸಹಾಯದಿಂದ ನಮ್ಮ ಗೆಳೆಯರಿಗೆ, ಸಂಬಂಧಿಕರಿಗೆ ಚಾರಿತ್ರ್ಯ ಹರಣವಾಗುವ ಸಂದೇಶಗಳನ್ನು ಹಾಗೂ ಎಡಿಟ್ ಮಾಡಿರುವ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಪ್ರಾರಂಭಿಸುತ್ತಾರೆ. ಮಾನಸಿಕವಾಗಿ ತೊಂದರೆ ಕೊಡಲು ಪ್ರಾರಂಭಿಸುತ್ತಾರೆ.

ಆದ್ದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಅಥವಾ ತಮ್ಮ ಮೊಬೈಲಗಳಿಗೆ ಸಾಲ ಕೊಡುತ್ತೇವೆ ಅಂತಾ ಬಂದಿರುವ ಸಂದೇಶಗಳ ಮೇಲೆ ವಿಶ್ವಾಸ ಮಾಡಿ ಅನಧೀಕೃತವಾಗಿರುವ Loan App ಗಳನ್ನು ಇನ್ಸಾಲ್ ಮಾಡಿಕೊಂಡು ಸಾಲ ಮಾಡುವ ದುಸ್ಸಾಹಸ್ಸಕ್ಕೆ ಹೋಗಿ ಮೋಸ ಹೋಗಬಾರದಾಗಿ ತಮಗೆ ಈ ಮೂಲಕ ಕೋರಿಕೊಳ್ಳುತ್ತಿದ್ದೇವೆ. ಸದರಿ Loan App ಗಳಗೆ ಸರ್ಕಾರದಿಂದ ಯಾವುದೇ ಮಾನ್ಯತೆ ಇರುವುದಿಲ್ಲಾ.

ಈಗಾಗಲೇ ಭಾರತ ಸರ್ಕಾರವು ಇಂತಹ ಸಾಕಷ್ಟು Loan App ಗಳನ್ನು ಸ್ಥಗಿತಗೊಳಿಸಿರುತ್ತದೆ. ಆದರೂ ಸಹಾ ಸೈಬರ ವಂಚಕರು ನಾಯಿಕೊಡೆಗಳಂತೆ ಮತ್ತೆ ಮತ್ತೆ ಹೊಸ ಹೊಸ Loan App ಗಳನ್ನು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುತ್ತಾರೆ. ದಯವಿಟ್ಟು ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕಾಗಿ ಕೋರಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button