ಮಗಳ ಮನೆಗೆ ಹೋಗುತ್ತಿದ್ದಾಗ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿಹೊಡೆದ ಕಾರು: ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವು

ಭಟ್ಕಳ: ಮಂಗಳೂರಿನಿoದ ಮುಂಬೈ ಕಡೆ ಹೊರಟ ಕಾರೊಂದು ಪಾದಚಾರಿ ಮಹಿಳೆ ರಸ್ತೆ ದಾಟುವ ವೇಳೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾವಿನಕಟ್ಟೆ ಬೆಂಗ್ರೆ ಬಳಿ ನಡೆದಿದೆ. ಮ್ರತ ಮಹಿಳೆ ಮಾಸ್ತಮ್ಮ ಕುಪ್ಪಯ ನಾಯ್ಕ (60) ಇಲ್ಲಿನ ಬೆಳಕೆ ಗೊರಟೆಯ ನಿವಾಸಿ ಎಂದು ತಿಳಿದು ಬಂದಿದೆ.

ಮಹಿಳೆಯು ತನ್ನ ಮಗಳ ಮನೆಗೆ ಭಟ್ಕಳದಿಂದ ಬೆಂಗ್ರೆಗೆ ತೆರಳಿದ್ದು ಈ ವೇಳೆ ಟೆಂಪೋ ಇಳಿದು ನಡೆದುಕೊಂಡು ಹೋಗುವಾಗ ಮಂಗಳೂರಿನಿoದ ಮುಂಬೈ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಬಂದು ಬಡಿದಿದೆ. ಕಾರು ರಭಸದಿಂದ ಬಂದು ಬಡಿದ ಪರಿಣಾಮ ಮಹಿಳೆಯು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅಪಘಾತ ಗೊಳಿಸಿದ ಕಾರಿನಲ್ಲಿಯೇ ಮಹಿಳೆಯನ್ನು ತಕ್ಷಣಕ್ಕೆ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಮಹಿಳೆಯನ್ನು ಪರೀಕ್ಷೆ ನಡೆಸಿ ಮೃತಪಟ್ಟಿರುವುದು ದೃಢಪಡಿಸಿದ್ದಾರೆ. ಈ ಕುರಿತು ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version