ಅನಾರೋಗ್ಯ ಪೀಡಿತ ತನ್ನ ಹೆಂಡತಿಯ ಉಪಚಾರಕ್ಕಾಗಿ ಆರೋಗ್ಯಧಾಮದಲ್ಲಿ ಕಳೆದ ಕೆಲ ದಿನಗಳಿಂದ ವಾಸ್ತವ್ಯ ಮಾಡಿಕೊಂಡಿದ್ದ ವ್ಯಕ್ತಿಯ ಶವ ಕಡಲಕಿನಾರೆ ಬಳಿ ಪತ್ತೆ

ಅಂಕೋಲಾ : ಗಂಗಾವಳಿ ನದಿ ಮತ್ತು ಅರಬ್ಬೀ ಸಮುದ್ರ ಸಂಗಮ ಪ್ರದೇಶವಾದ ತಾಲೂಕಿನ ಕೆಳಗಿನ ಮಂಜಗುಣಿ ಕಡಲ ಕಿನಾರೆ ಬಳಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

ಆಂಧ್ರ ತೆಲಂಗಾಣ ಮೂಲದ ಸಂಗರೆಡ್ಡಿ ಜಿಲ್ಲೆಯ ರಾಮಲು ಮಲ್ಲಯ್ಯ ಲಂಗಚೇರು ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು ಈತನು ಅನಾರೋಗ್ಯ ಪೀಡಿತ ತನ್ನ ಹೆಂಡತಿಯ ಉಪಚಾರಕ್ಕಾಗಿ ಬೆಳಂಬಾರದ ಆರೋಗ್ಯಧಾಮದಲ್ಲಿ ಕಳೆದ ಕೆಲ ದಿನಗಳಿಂದ ವಾಸ್ತವ್ಯ ಮಾಡಿಕೊಂಡಿದ್ದ.

ಕುಡಿತದ ಚಟ ಹೊಂದಿದ್ದ ಈತ ಬೆಳಗಿನ ಜಾವವೇ ಯಾರಿಗೂ ಹೇಳದೇ ಆಸ್ತತ್ರೆಯಿಂದ ಹೊರ ಹೋಗಿದ್ದು ಮರಳಿ ಬಂದಿರಲಿಲ್ಲ ಎನ್ನಲಾಗಿದೆ . ಆತ ಎಲ್ಲಿ ಹೋದ ಯಾಕೆ ಹೋದ ಎಂದು ಆರೋಗ್ಯ ಧಾಮದ ಸಿಬ್ಬಂದಿಗಳು ಮತ್ತು ಸ್ಥಳೀಯರು ಬಹು ಹೊತ್ತು ಹುಡುಕಾಟ ನಡೆಸಿದ್ದರಾದರೂ ಆತನ ಇರುವಿಕೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಬೆಳಂಬಾರ ಕಡಲ ತೀರದಿಂದ ಹೊನ್ನೆಬೈಲ್ ಮಂಜಗುಣಿ ಕಡಲ ಕಿನಾರೆ ಗುಂಟ ಅದಾವುದೋ ಕಾರಣದಿಂದ ಸಾಗಿರುವ, ಇಲ್ಲವೇ ಬಹಿರ್ದೆಸೆ ಮತ್ತಿತರ ಕಾರಣಗಳಿಂದ ಸಮುದ್ರ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಬಗ್ಗೆ ಕೇಳಿ ಬಂದಿದೆ.

ಮಂಜುಗುಣಿ ಕಡಲತೀರದ ಬಳಿ ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ.. ಸ್ಥಳಕ್ಕೆ 112 ತುರ್ತು ವಾಹನ ಸಿಬ್ಬಂದಿಗಳು ಭೇಟಿ ನೀಡಿದರು. ಅಂಕೋಲಾ ಪಿಎಸ್ಐ ಮಾಲಿನಿ ಹಂಸಭಾವಿ ಸ್ಥಳ ಪರಿಶೀಲನೆ ನಡೆಸಿ,ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸ್ಥಳೀಯ ಯುವಕ ಕಮಲೇಶ ಕುಡ್ತಲಕರ್ ,ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ನಾಯ್ಕ,ಹಾಗೂ ಪೊಲೀಸ್ ಸಿಬ್ಬಂದಿಗಳು ಸಹಕರಿಸಿದರು.ಸುದರ್ಶನ್ ತಾಂಡೇಲ್ ಇದ್ದರು.

ಬೆಳಂಬರದ ಸಮಾಜಿಕ ಕಾರ್ಯಕರ್ತ ಮಹದೇವ ಗೌಡ ಮತ್ತಿತರರು ಕುಟುಂಬಸ್ಥರಿಗೆ ಆಸ್ಪತ್ರೆಯಲ್ಲಿದ್ದ ರಾಮಲು ಕಾಣೆಯಾಗಿರುವ ಕುರಿತು ಆತನ ಮಗನಿಗೆ ಮೊದಲೇ ಸುದ್ದಿ ತಲುಪಿಸಿದ್ದರಿಂದ, ದೂರದ ತೆಲಂಗಾಣದಲ್ಲಿದ್ದ ಮಗ ಕೂಡಲೇ ಅಲ್ಲಿಂದ ಅಂಕೋಲಾದತ್ತ ಹೊರಟಿದ್ದ ಎನ್ನಲಾಗಿದೆ. ನಂತರ ಆತ ಅಂಕೋಲಾಕ್ಕೆ ಬಂದು, ಪೊಲೀಸ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ನಾಟಿ ವೈದ್ಯ ಹನುಮಂತ ಗೌಡ, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಶವಸಾಗಾಣಿಕಾ ವಾಹನ ವ್ಯವಸ್ಥೆ ಮಾಡಲು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version