ಅಂಕೋಲಾ: ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ನಿವಾಸಿ ದತ್ತಾ ಪುರುಷೋತ್ತಮ ನಾಯ್ಕ (62), ಅನಾರೋಗ್ಯದಿಂದ ಗುರುವಾರ ಮಧ್ಯಾಹ್ನ ಸ್ವಗೃಹದಲ್ಲಿ ವಿಧಿವಶರಾದರು. ಕೋಮಾರಪಂಥ ಸಮಾಜದ ಹಕ್ಕುದಾರರ ಮನೆತನದವರಾಗಿದ್ದ ಇವರು ಸಮಾಜದ ಸುಗ್ಗಿ ಮತ್ತಿತರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಊರಿನ ಹಲವು ವಿಧಾಯಕ ಕಾರ್ಯಗಳಿಗೆ ಸಹಕರಿಸುತ್ತಿದ್ದರು,ತಮ್ಮ ಸರಳ ವ್ಯಕ್ತಿತ್ವ- ಮೃದು ಮತ್ತು ಮಿತ ಭಾಷೆಯ ಮೂಲಕ ಎಲ್ಲ ಸಮಾಜದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು.
ಪ್ರಗತಿಪರ ರೈತರಾಗಿದ್ದ ಇವರು,ಹಲವು ವರ್ಷಗಳ ಕಾಲ ಸ್ಥಳೀಯ ಐಸ್ ಫ್ಯಾಕ್ಟರಿ ಯಲ್ಲಿಯೂ ಕೆಲಸ ನಿರ್ವಹಿಸಿ ಐಸ್ ಫ್ಯಾಕ್ಟರಿ ದತ್ತಣ್ಣ ಎಂದೇ ಚಿರಪರಿಚಿತರಾಗಿದ್ದರು. ಮೃತರು,ಮಡದಿ,ಗಂಡು ಮಕ್ಕಳು ಮತ್ತು ಸೊಸೆಯಂದಿರು ಸೇರಿ,ಅಪಾರ ಬಂಧು-ಬಳಗ ತೊರೆದಿದ್ದಾರೆ. ದತ್ತಾ ನಾಯ್ಕ ಇವರ ಅಕಾಲಿಕ ನಿಧನಕ್ಕೆ, ಮಾಜಿ ಶಾಸಕ ಸತೀಶ ಸೈಲ್, ಉದ್ಯಮಿ ಕಿರಣ ನಾರ್ವೇಕರ,ಡಾ. ಸಂಜು ನಾಯಕ, ಪುರಸಭೆ ಸದಸ್ಯ ಕಾರ್ತಿಕ ನಾಯ್ಕ, ಕನಸಿಗದ್ದೆಯ ವಿಜಯಕುಮಾರ ನಾಯ್ಕ, ಶಿವಾನಂದ ಅಲಿಗದ್ದಾ, ಮೋಹನ ನಾಯ್ಕ, ಗಣಪತಿ ನಾಯ್ಕ ಸೇರಿದಂತೆ ಸ್ಥಳೀಯ ಹಾಗೂ ಜಿಲ್ಲೆಯ ಕೋಮಾರಪಂಥ ಸಮಾಜದ ಹಿರಿ-ಕಿರಿ ಮುಖಂಡರು, ಇತರೇ ಸಮಾಜದ ಗಣ್ಯರನೇಕರು, ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಕೋಟೆವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ನಡೆಸಲಾಯಿತು. ಲಕ್ಷ್ಮೇಶ್ವರ, ಕೆರೆಕಟ್ಟಾ, ಕುಂಬಾರಕೇರಿ, ಹೊನ್ನೆಕೇರಿ, ಕುಮಟಾ, ಹಾಗೂ ಇತರೆಡೆಯ ಬಂಧು – ಬಾಂಧವರು, ಆಪ್ತರು, ಕುಟುಂಬ ವರ್ಗದವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ