Big News
Trending
ಮುರುಡೇಶ್ವರ ನಿರ್ಮಾತೃ ದಿವಂಗತ ಡಾ.ಆರ್. ಎನ್. ಶೆಟ್ಟಿಯವರ ಪ್ರತಿಮೆ ಮುರುಡೇಶ್ವರದಲ್ಲಿ ಅನಾವರಣ: 15 ft ಉದ್ದದ ಕಂಚಿನ ಪ್ರತಿಮೆ
ಮುರುಡೇಶ್ವರ ನಿರ್ಮಾತೃ ದಿವಂಗತ ಡಾ.ಆರ್. ಎನ್. ಶೆಟ್ಟಿಯವರ ಪ್ರತಿಮೆಯನ್ನು ಮುರುಡೇಶ್ವರದಲ್ಲಿ ಆರ್.ಎನ್.ಶೆಟ್ಟಿಯವರ ಪುತ್ರ ಸುನೀಲ ಶೆಟ್ಟಿ
ಅನಾವರಣಗೊಳಿಸಿದರು.
ಮುರುಡೇಶ್ವರ ಶಿವನ ವಿಗ್ರಹದ ಮುಂಭಾಗದಲ್ಲಿರುವ ಕಂದುಕಗಿರಿಯಲ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ. ಸುಮಾರು 1560 ಕೆಜೆ ತೂಕದ ಕಂಚಿನ ಪ್ರತಿಮೆ ಇದಾಗಿದ್ದು 15 ಫಿಟ್ ಉದ್ದದವಿದೆ. ಮುರುಡೇಶ್ವರ ನಿರ್ಮಾತೃ ದಿವಂಗತ ಡಾ.ಆರ್.ಎನ್.ಶೆಟ್ಟಿ ಯವರ ಈ ಸುಂದರ ಪ್ರತಿಮೆಯನ್ನು ಶ್ರೀಧರ ಶಿಲ್ಪಿಯವರ ಸುಂದರ ಕೈಚಳದಿಂದ ಮೂಡಿ ಬಂದಿದ್ದು ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ವಿಶೇಷವೇನೆಂದರೆ ವಿಶ್ವಪ್ರಸಿದ್ಧ ಮುಡೇಶ್ವರದ ಶಿವನ ವಿಗ್ರಹ ತಯಾರಿಸಿದ ಕಾಶೀನಾಥ ಅವರ ಪುತ್ರರಾದ ಶ್ರೀಧರ ಶಿಲ್ಪಿಯವರು ಡಾ.ಆರ್. ಎನ್. ಶೆಟ್ಟಿಯವರ ಪ್ರತಿಮೆಯನ್ನು ತಯಾರಿಸಿದವರಾಗಿದ್ದಾರೆ .ಪ್ರತಿಮೆ ಅನಾವರಣ ಸಂದರ್ಭದಲ್ಲಿ ಡಾ.ಆರ್. ಎನ್. ಶೆಟ್ಟಿಯವರ ಕುಟುಂಬದವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ