ಕುಮಟಾ : ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವಪರಿಸರ ದಿನದ ನಿಮಿತ್ತ ಪರಿಸರ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತç ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಶ್ರೀಮತಿ. ಗೀತಾ ಎಸ್. ನಾಯ್ಕ ಇವರು ಭೂಮಿಯು ಹುಟ್ಟಿದ ದಿನದಿಂದ ಹಿಡಿದು ಸಸ್ಯ ಜಗತ್ತಿನ ವಿಕಾಸದಿಂದ ಪರಿಸರದ ಕುರಿತು ಜ್ಞಾನ ನೀಡಿ ಇಂದು ಪರಿಸರ ಮಾಲಿನ್ಯ ಆಗುತ್ತಿರುವ ಬಗ್ಗೆ ಹಾಗೂ ಪರಿಸರ ಸ್ನೇಹಿಗಳಾಗಿ ಪರಿಸರ ರಕ್ಷಣೆ ಮೂಲಕ ಸುಸ್ಥಿರ ಸಮಾಜದ ನಿರ್ಮಾಣದ ಕುರಿತು ಮನೋಜ್ಞವಾಗಿ ವಿವರಿಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ. ಪ್ರೀತಿ ಭಂಡಾರಕರ ಇವರು ಪರಿಸರ ರಕ್ಷಣೆಯಲ್ಲಿ ಭಾವಿ ಶಿಕ್ಷಕರಾದ ಶಿಕ್ಷಕ ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತು ಹಲವು ದೃಷ್ಟಾಂತಗಳೊoದಿಗೆ ತಿಳಿಯಪಡಿಸಿದರು. ಬಿಂದು ಜೋಗಳೇಕರ ಹಾಗೂ ನಿಲೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಜೇನ್ ರೋಡ್ರಿಗೀಸ್ ಸಭೆಗೆ ಸ್ವಾಗತಕೋರಿ ಅತಿಥಿಗಳನ್ನು ಪರಿಚಯಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ಎಚ್. ಎಮ್. ನಿನಾದ ವೇದಿಕೆ ಮೇಲೆ ಉಪಸ್ಥಿತರಿದ್ದರು.