ಶೇಡಿಕಟ್ಟಾದ ಪ್ರಥಮಸೋಂಕಿತ ಗುಣಮುಖ
ಇಂದು ಬಂದ 18 ವರದಿ ನೆಗೆಟಿವ್
ಅಂಕೋಲಾ : ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಆದರೆ ಕಳೆದ 2-3 ದಿನಗಳಿಂದ ಯಾವುದೇ ಹೊಸ ಕೋವಿಡ್-19 ಪ್ರಕರಣಗಳು ಕಾಣಿಸಿಕೊಳ್ಳದೇ ಜನತೆ ಕೊಂಚ ನೆಮ್ಮದಿಯಿಂದ ಇರುವಂತಾಗಿದೆ. ಈ ನಡುವೆ ಅಗ್ರಗೋಣ-ಶೇಡಿಕಟ್ಟಾ ಪ್ರಥಮ ಸೋಂಕಿತ ವ್ಯಕ್ತಿ ಗುಣಮುಖನಾಗಿದ್ದು, ಮುಂದಿನ 1-2 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾನೆ ಎನ್ನಲಾಗಿದೆ. ಆತನಿಗೆ ಈ ಹಿಂದೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಅಗ್ರಗೋಣ ಬೀಟ್ ಪೋಲಿಸನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವರದಿಯು ನೆಗೆಟಿವ್ ಬಂದಿರುವುದು ಎಲ್ಲರ ಆತಂಕ ದೂರಮಾಡಿದೆ.
ಗಂಟಲು ದ್ರವ ವರದಿ : ಗುರುವಾರ ಅಂಕೋಲಾದಿಂದ ಮತ್ತೆ ಹೊಸದಾಗಿ 23 ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟಾರೆಯಾಗಿ ಈವರೆಗೆ 908 ಗಂಟಲುದ್ರವ ಪರೀಕ್ಷೆಗೆ ಕಳುಹಿಸಿದಂತಾಗಿದೆ. ಇಂದು ಬಂದ 18 ವರದಿಗಳು ನೆಗೆಟಿವ್ ಬಂದಿದೆ ಎನ್ನಲಾಗಿದೆ. ಇನ್ನೂ ಕೆಲವು ವರದಿಗಳು ಬರಬೇಕಿದೆ.
ತಾಲೂಕಿನ ಒಟ್ಟು 21 ಸೋಂಕಿತರಲ್ಲಿ ಭಾವಿಕೇರಿ ಮಹಿಳೆ ಗುಣಮುಖರಾಗಿ 20 ಸಕ್ರೀಯ ಪ್ರಕರಣಗಳಿದ್ದವು. ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯ ಪ್ರಥಮ ಸೋಂಕಿತನ ಹೆಂಡತಿ, ಮಗಳು ಸೇರಿದಂತೆ ಒಟ್ಟು 7 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವುದರೊಂದಿಗೆ ತಾಲೂಕಿನಲ್ಲಿ ಕೇವಲ 13 ಸಕ್ರೀಯ ಪ್ರಕರಣಗಳು ಉಳಿದಂತಾಗಿದೆ. ನಿರಂತರ ಮಾನವೀಯ ಸೇವೆ ಸಲ್ಲಿಸಿದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಸಾರ್ಥಕ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.©ವಿಸ್ಮಯ ಟಿ.ವಿ
ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಮಾರ್ಗದರ್ಶನದಲ್ಲಿ ಕುಮಟಾ ಉಪವಿಭಾಗಾಧಿಕಾರಿ ಅಜೀತ್ ಎಮ್, ತಹಶೀಲ್ದಾರ ಉದಯ ಕುಂಬಾರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಪಿ.ವೈ ಸಾವಂತ, ಸಿ.ಪಿ.ಐ ಕೃಷ್ಣಾನಂದ ನಾಯಕ, ಪಿ.ಎಸ್.ಐ ಇ.ಸಿ ಸಂಪತ್ ತಾಲೂಕಿನ ವಿವಿಧ ಅಧಿಕಾರಿಗಳು ಸೇರಿದಂತೆ ಎಲ್ಲಾ ಸ್ತರದ ಕೊರೊನಾ ವಾರಿಯರ್ಸ್ ಯೋಧರು ಅವಿರತವಾಗಿ ಸೋಂಕು ನಿಯಂತ್ರಣಕ್ಕೆ ಕ್ರಮ ಮತ್ತು ಶ್ರಮ ವಹಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
[sliders_pack id=”1487″]