Follow Us On

Google News
Important
Trending

ಮನೆಯಿಂದ ಹೋದ ಯುವತಿ ನಾಪತ್ತೆ: ಮಗಳನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ ತಂದೆ

ಕುಮಟಾ: ತಾಲೂಕಿನ ಕೂಜಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಿಮನೆ ಘಾಟ್ ನಿವಾಸಿಯಾದ ಅನ್‌ಹಾನ್ ಇಮ್ತಿಯಾಜ್ ಮುಲ್ಲಾ ಎಂಬ 23 ವರ್ಷದ ಯುವತಿಯು ಬುಧವಾರದಂದು ನಾಪತ್ತೆಯಾಗಿದ್ದಾಳೆ. ಈ ಕುರಿತಾಗಿ ತಂದೆ ಇಮ್ತಿಯಾಜ್ ಮುಲ್ಲಾ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅನ್‌ಹಾನ್ ಇಮ್ತಿಯಾಜ್ ಮುಲ್ಲಾ ಈಕೆಯು ಬುಧವಾರದಂದು ಮುಂಜಾನೆಯ ವೇಳೆ ಯಾರಿಗೂ ಸಹ ಹೇಳದೆ ಮನೆಯಿಂದ ಹೋದವಳು ಈ ವರೆಗೆ ಮನೆಗೂ ಬಾರದೇ, ಸಂಬoಧಿಕರ ಮನೆಗೂ ಹೋಗದಿರುವ ಹಿನ್ನೆಲೆಯಲ್ಲಿ ಕಾಣೆಯಾದ ಮಗಳನ್ನು ಹುಡುಕಿಕೊಡುವಂತೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡ ಕುಮಟಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ

Back to top button