ರಾಷ್ಟ್ರೀಯ ಹೆದ್ದಾರಿಯ ಗಟಾರ ಸಮೀಪ ಸುರಂಗ ಪತ್ತೆ:? ಬ್ಯಾರಿಕೇಡ್ ಅಳವಡಿಕೆ

ಹೊನ್ನಾವರ: ತಾಲೂಕಿನ ಆರೊಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಗಟಾರ ಸಮೀಪ ಸುರಂಗ ಪತ್ತೆಯಾಗಿದ್ದು, ರಸ್ತೆ ಕುಸಿಯುವ ಭೀತಿ ಆತಂಕ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ 206ರ ಆರೊಳ್ಳಿ ತಿರುವಿನ ಸಮೀಪ ತಿರುವಿನಿಂದ ಕೂಡಿರುವ ಪ್ರದೇಶದಲ್ಲಿ ಈ ಸುರಂಗ ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಸ್ಥಳಕ್ಕೆ ತಹಶೀಲ್ದಾರ ನಾಗರಾಜ ನಾಯ್ಕಡ್ ಸಿಪಿಐ ಶ್ರೀಧರ ಎಸ್.ಆರ್, ಪಿಎಸೈ ಶಶಿಕುಮಾರ ಆನಂದಮೂರ್ತಿ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಆಗಿರುದರಿಂದ ಸುರಕ್ಷೀತ ವಾಹನ ಸಂಚಾರಕ್ಕೆ ಸ್ಥಳದಲ್ಲಿ ಬ್ಯಾರಿಕೇಟ್ ಅಳವಡಿಸಿದ್ದಾರೆ. ಜೆಸಿಬಿ ಮೂಲಕ ಬಂಡೆಗಲ್ಲು ಹಾಗೂ ಮಣ್ಣನ್ನು ಹಾಕಿ ಅನಾಹುತ ಸಂಭವಿಸದoತೆ ನೋಡಿಕೊಳ್ಳುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button