ಕಡಲತೀರದಲ್ಲಿ ಡಾಲ್ಫಿನ್ ಮೃತ ದೇಹವೊಂದು ಪತ್ತೆ: ದೇಹದೊಳಗಿತ್ತು ನೈಲಾನ್ ಬಲೆ

ಕಾರವಾರ: ತಾಲೂಕಿನ ದೇವಭಾಗ ಕಡಲತೀರದಲ್ಲಿ ಡಾಲ್ಫಿನ್ ಮೃತ ದೇಹವೊಂದು ಪತ್ತೆಯಾಗಿದೆ. ಸುಮಾರು 7.5 ಅಡಿ ಉದ್ದದ ಗಂಡು ಡಾಲ್ಫಿನ್ ಮೃತ ದೇಹ ಇದಾಗಿದ್ದು, ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಪ್ರಜಾತಿಗೆ ಸೇರಿದೆ ಎನ್ನಲಾಗಿದೆ.

ಮೃತದೇಹ ಕಂಡ ಮೀನುಗಾರರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ ಅವರ ಮಾರ್ಗದರ್ಶನದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಡಾಲ್ಫಿನ್ ಹೊಟ್ಟೆಯಲ್ಲಿ ನೈಲಾನ್ ಬಲೆ ತುಂಬಿಕೊoಡಿರುವುದು ಪತ್ತೆಯಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version