
ಶಿರಸಿ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣದಿಂದ ಸಿದ್ದಾಪುರ ತಾಲೂಕಿನ ಕಾನಸೂರು ಮಾದ್ನಕಳ್ ರಸ್ತೆ ಸಂಪರ್ಕ ಸಂಪೂರ್ಣ ಕಡಿತ ಗೊಂಡಿದೆ.
- ಬೃಹತ್ ಶೋರೂಮ್ ಬ್ರೌನ್ವುಡ್ ನಲ್ಲಿ 12 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ
- ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ
- ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಈಗಿನಿಂದಲೇ ಸಮಯಕ್ಕೆ ಮಹತ್ವ ನೀಡಿ : ಡಾ. ಗಣೇಶ ನಾಗ್ವೇಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಮ್ಮೇಳನ
ಈ ಹಿಂದೆ ಇದ್ದ ಸುತುವೆ ಕೆಡವಿ ಹೊಸ ಸೇತುವೆಯನ್ನು ನಿರ್ಮಾಣಮಾಡಲಾಗುತ್ತಿದೆ.ಆದರೆ ಹೊಸ ಸೇತುವೆ ನಿರ್ಮಾಣ ಕಾರ್ಯ ಮುಗಿಯದ ಕಾರಣ ಬದಲಿ ವ್ಯವಸ್ಥೆ ಯನ್ನು ಮಾಡಲಾಗಿತ್ತು.
ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಘನಾಶಿನಿ ನದಿ ಮೈದುಂಬಿ ಹರಿಯುತ್ತಿದ್ದು ಬದಲಿ ಮಾರ್ಗ ವೂ ಜಲಾವೃತ ವಾಗಿದೆ.ಇದರಿಂದ ಮಾದ್ನಕಳ್,ದೇವಿಸರ, ಗಿರಗಡ್ಡೆ ಸೇರಿ ಹಲವು ಗ್ರಾಮಗಳ ಜನರು ಹಾಗೂ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಸ್ಮಯ ನ್ಯೂಸ್ ಶಿರಸಿ