ಕುಮಟಾ: ಕುಮಟಾದಲ್ಲಿ ಸಸ್ಯ & ಬೀಜಗಳ ಪ್ರದರ್ಶನ, ಮಾರಾಟ ಮೇಳವನ್ನು ಜುಲೈ 8 ರಿಂದ 10ರ ವರೆಗೆ ಆಯೋಜಿಸಲಾಗಿದೆ. ಹೊಸ ಬಸ್‌ನಿಲ್ಧಾಣದ ಸಮೀಪವಿರುವ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಆವಾರದಲ್ಲಿ ಸಸ್ಯ & ಬೀಜಗಳ ಪ್ರದರ್ಶನ, ಮಾರಾಟ ಮೇಳ ನಡೆಯಲಿದೆ. 25ಕ್ಕೂ ಹೆಚ್ಚು ಹಲಸಿನ ತಳಿಗಳ ಮಾರಾಟದ ಜೊತೆಗೆ ಇತರೆ ಜಾತಿಯ ಬೀಜಗಳ ಪ್ರದರ್ಶನ, ಮಾರಾಟಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಶಿರಸಿ, ತೋಟಗಾರಿಕೆ ಇಲಾಖೆ ಕುಮಟಾ, ಕೃಷಿ ವಿಸ್ತರಣಾ ಘಟಕ ಕುಮಟಾ, ಯುಗಾದಿ ಉತ್ಸವ ಸಮಿತಿ ಕುಮಟಾ ಹಾಗೂ ಯು.ಕೆ ಕೋಫೆಡ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಮೇಳ ಆಯೋಜಿಸಲಾಗಿದೆ. ಈ ಒಂದು ಸಸ್ಯಮೇಳದಲ್ಲಿ ಹಲಸಿನ ಜೋತೆಗೆ ಇನ್ನಿತರ ಅನೇಕ ಜಾತಿಯ ಗಿಡಗಳು ದೊರೆಯಲಿದ್ದು ಸಾರ್ವಜನಿಕರು ಈ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ , ಕುಮಟಾ