ಮಳೆಯಿಂದಾಗಿ ಜನವಸತಿ ಪ್ರದೇಶಕ್ಕೆ ನುಗುತ್ತಿದೆ ಬೃಹತ್ ಹಾವುಗಳು: ಉರಗ ತಜ್ಞರಿಂದ ರಕ್ಷಣೆ

ಕಳೆದ ಕೆಲದಿನಗಳಿಂದ ಜೋರಾಗಿ ಸುರಿಯಿತ್ತಿರವ ಮಳೆಯ ಪರಿಣಾಮ ಬೆಟ್ಟಗುಡ್ಡಗಳಿಂದಲೂ ಹರಿದು ಬರುವ ನೀರು ಹಳ್ಳ ಕೊಳ್ಳಗಳನ್ನು ಸೇರುತ್ತಿದೆ.ನೀರಿನ ರಭಸಕ್ಕೆ ಹೆಬ್ಬಾವು ಮತ್ತಿತರ ಜೀವಿಗಳು ಬಂದು ಸೇರಿಕೊಳ್ಳುವ ಆತಂಕ ಎದುರಾಗುತ್ತಿದೆ. ಎಡ ಬಿಡದೇ ಅಬ್ಬರಿಸಿದ ಭಾರೀ ಮಳೆಯಿಂದಾಗಿ ಬೆಟ್ಟ ಗುಡ್ಡಗಳಿಂದ ಹರಿದ ನೀರಿನೊಂದಿಗೆ ಹಾವುಗಳ ಕೊಚ್ಚಿ ಬಂದು ಜನ ವಸತಿ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಉರಗ ಸಂರಕ್ಷಕ ಮಹೇಶ ನಾಯ್ಕ. ಅದಕ್ಕೆ ಉದಾಹರಣೆ ಎಂಬಂತೆ ಇತ್ತಿಚೆಗೆ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ ಚೆಂಡಿಯಾ ಗ್ರಾಮದ ಎರಡು ಕಡೆಗಳಲ್ಲಿ ಕಂಡು ಬಂದ ಎರಡು ಬೃಹತ್ ಹೆಬ್ಬಾವುಗಳನ್ನು ಉರಗ ಪ್ರೇಮಿ ಮಹೇಶ ನಾಯ್ಕ, ಅವರ್ಸಾ ಅವರು ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಚೆಂಡಿಯಾದ ರವಿ ಊಗಾ ನಾಯ್ಕ ಎನ್ನುವವರ ತೋಟದಲ್ಲಿ ಕಂಡು ಬಂದ 12 ಅಡಿಯ ಹೆಬ್ಬಾವನ್ನು ಮಹೇಶ ನಾಯ್ಕ ಅವರು ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.  ಅದೇ ರೀತಿ ಚೆಂಡಿಯಾ ಇಡೂರಿನಲ್ಲಿ ಪರಶುರಾಮ ನಾಯ್ಕ ಅವರ ಮನೆಯ ಕೋಳಿ ಗೂಡಿಗೆ ನುಗ್ಗಿ ಎರಡು ಕೋಳಿ ನುಂಗಿ ಮತ್ತು ಎರಡು ಕೋಳಿಗಳನ್ನು ಸಾಯಿಸಿ ಕಟ್ಟಿಗೆ ರಾಶಿಯಲ್ಲಿ ಸೇರಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ನಂತರ ಅದನ್ನು ಕಾಡಿಗೆ ಬಿಡಲಾಗಿದೆ. 

ಮಳೆಗಾಲದ ಸಂದರ್ಭದಲ್ಲಿ ನೀರು ತುಂಬಿ ಹಾವುಗಳು ಜನ ವಸತಿ ಪ್ರದೇಶಗಳಿಗೆ ನುಗ್ಗುವುದು ಹೆಚ್ಚಾಗಿದ್ದು, ಸಾರ್ವಜನಿಕರು ತಮ್ಮ ಮನೆ , ಕೊಟ್ಟಿಗೆ, ಕಟ್ಟಿಗೆ ರಾಶಿ, ಕೋಳಿಗೂಡು ಮತ್ತಿತರ ಬೆಚ್ಚಗಿನ ಪ್ರದೇಶಗಳಲ್ಲಿ  ಹಾವುಗಳು ಆಶ್ರಯ ಪಡೆಯದಂತೆಎಚ್ಚರಿಕೆ ವಹಿಸಬೇಕು ಎಂದು ಮಹೇಶ ನಾಯ್ಕ ಹೇಳುತ್ತಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version