Important
Trending

ಟೋಲ್ ಗೇಟ್ ಬಳಿ ನಾಪತ್ತೆಯಾಗಿದ್ದ ವ್ಯಕ್ತಿ ಪಕ್ಕದ ತಾಲೂಕಿನಲ್ಲಿ ಪತ್ತೆ? ರಾತ್ರಿ ಮಗ ಮಲಗಿದ್ದಾಗ ಎದ್ದು ಹೋದ ತಂದೆ ಮತ್ತೆ ಮಗನ ಕಣ್ಣೆದುರು ಸಿಕ್ಕಿದ್ದು ಎಲ್ಲಿ?

ಮಗ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಲಾರಿ ಇಳಿದು ಹೋಗಿದ್ದ ತಂದೆ

ಅಂಕೋಲಾ:ಮಗನ ಜೊತೆ ಲಾರಿಯಲ್ಲಿ ಬಂದ ವಯೋವೃದ್ಧ ವ್ಯಕ್ತಿ ನಾಪತ್ತೆ ಆದ ಘಟನೆ ತಾಲೂಕಿನ ಹಟ್ಟಿಕೇರಿ ಟೋಲ್ ನಾಕಾ ಬಳಿ ಶುಕ್ರವಾರ ಬೆಳಿಗ್ಗಿನ ಜಾವ ಸಂಭವಿಸಿತ್ತು. ಕೇರಳದ ಜಾಯ್ ಜಾರ್ಜ್ (70) ಎಂಬಾತ ತನ್ನ ಮಗನ ಜೊತೆ ಲಾರಿಯಲ್ಲಿ  ಗೋವಾದಿಂದ ಕೇರಳಕ್ಕೆ ಹೊರಟಿದ್ದ.  ದಾರಿ ಮಧ್ಯೆ ರಾ.ಹೆ 66 ರ ಅಂಕೋಲಾದ  ಹಟ್ಟಿಕೇರಿ ಟೋಲ್ ಗೇಟ್ ಬಳಿ ಲಾರಿ ನಿಲ್ಲಿಸಿ, ಮಗ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ, ಮಾನಸಿಕವಾಗಿ ಅಸ್ವಸ್ಥನಾಗಿದ್ದ ತಂದೆ ಲಾರಿಯಿಂದ ಇಳಿದು ಹೋಗಿದ್ದು ಬೆಳಿಗ್ಗೆ ಆಗುತ್ತಲೇ ತಂದೆಗಾಗಿ ಮಗ ಹುಡುಕಾಡುವಂತಾಗಿದೆ. ನಂತರಆತ ಕಾಣೆಯಾಗಿರುವುದಾಗಿ ಪೊಲೀಸರಿಗೂ ದೂರು ನೀಡಿದ್ದ.

ಈ ನಡುವೆ ಪೊಲೀಸರು ನಾಪತ್ತೆಯಾದ ವ್ಯಕ್ತಿಯ ಭಾವಚಿತ್ರವನ್ನು ನೀಡಿ,ಆತನ ಸುಳಿವು ಸಿಕ್ಕರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡಿದ್ದರು.ಸ್ಥಳೀಯರು ಸುತ್ತಮುತ್ತಲು ಹುಡುಕಾಡಿದ್ದರೂ ಆತ ಸಿಕ್ಕಿರಲಿಲ್ಲ. ಅಷ್ಟರಲ್ಲಾಗಲೇ ಜಾಯ್ ಜಾರ್ಜ  ಅದೆಗೋ ಕುಮಟಾ ತಲುಪ್ಪಿದ್ದ ಎನ್ನಲಾಗಿದ್ದು, ಬಹುಹೊತ್ತು ಹುಡುಕಿದರೂ ತಂದೆ ಸಿಗದ ನಿರಾಶೆಯಲ್ಲಿ ಹಾಗೂ ಲಾರಿಯಲ್ಲಿದ್ದ   ಸರಕು ತಲುಪಿಸಬೇಕಾದ ಅನಿವಾರ್ಯತೆಯಲ್ಲಿ ಅಂಕೋಲಾದಿಂದ ಕುಮಟಾ ಕಡೆ  ಹೊರಟಿದ್ದ ಮಗ,  ಕುಮಟಾ ಬಳಿ ಬರುತ್ತಿದ್ದಂತೆ ಅದೇ ದಾರಿಯ ಹತ್ತಿರ ತಂದೆಯನ್ನು ಕಂಡಿದ್ದು, ಬಳಿಕ ತಂದೆಯನ್ನು ಕರೆದು ಕೊಂಡು ಮಗ ಮುಂದಿನ ಪಯಣ ಬೆಳಸಿದ ಎನ್ನಲಾಗಿದೆ.                     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button