Follow Us On

WhatsApp Group
Important
Trending

ಬಿಎಸ್‌ಎನ್‌ಎಲ್ ಎಕ್ಸ್ ಚೇಂಜ್ ಒಳಗಡೆ ನುಗ್ಗಿದ ಮಳೆನೀರು: ಸುಟ್ಟುಹೋದ ಉಪಕರಣ

ಸುಮಾರು 2 ಲಕ್ಷ ರೂ.ಗೂ ಅಧಿಕ ಹಾನಿ

ಕಾರವಾರ: ಬಿಎಸ್‌ಎನ್ ಎಲ್ ಎಕ್ಸ್ ಚೇಂಜ್ ಒಳಗಡೆ ಮಳೆ ನೀರು ನುಗ್ಗಿದ ಘಟನೆ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ. ಮಳೆ ನೀರು ನುಗ್ಗಿದ ಪರಿಣಾಮ ಎಕ್ಸ್ ಚೇಂಜ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ. ಉಪಕರಣಗಳು ಶಾರ್ಟ್ ಆಗಿ ಸುಟ್ಟು ಹೋದ ಪರಿಣಾಮ ಬಿಎಸ್‌ಎನ್‌ಎಲ್‌ನವರಿಗೆ ಸುಮಾರು 2 ಲಕ್ಷ ರೂ.ಗೂ ಅಧಿಕ ಹಾನಿ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ.

ಮಾಜಾಳಿಯಲ್ಲಿ ಹೆದ್ದಾರಿ ಪಕ್ಕದಲ್ಲಿ ಬಿಎಸ್ ಎನ್ ಎಲ್ ಎಕ್ಸ್ ಚೇಂಜ್ ಕಟ್ಟಡ ಸ್ವಲ್ಪ ತಗ್ಗುಪ್ರದೇಶದಲ್ಲಿದೆ. ಹೀಗಾಗಿ ಭಾರೀ ಮಳೆಯಿಂದಾಗಿ ಎಕ್ಸಚೆಂಜ್ ಕಟ್ಟಡದ ಒಳಗೆ ನೀರು ನುಗ್ಗಿದೆ. ನೀರು ನುಗ್ಗುವ ಸಂದರ್ಭದಲ್ಲಿ ಎಕ್ಸಚೆಂಜ್ ಕಟ್ಟಡದ ಎಲ್ಲ ಉಪಕರಣಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಶಾರ್ಟ್ ಸರ್ಕ್ಯೂಟ್ ಆಗಿ ಎಲ್ಲಾ ಉಪಕರಣಗಳು ಸುಟ್ಟುಹೋಗಿವೆ.

ವಿಸ್ಮಯ ನ್ಯೂಸ್, ಕಾರವಾರ

Back to top button