ಅಂಕೋಲಾ: ಜುಲೈ 22ರಂದು ಪ್ರಕಟವಾದ ಸಿ.ಬಿ.ಎಸ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಕೇಂದ್ರಿಯ ವಿದ್ಯಾಲಯ ಐಎನ್ಎಸ್ ಕದಂಬ ಅರ್ಗಾದ ವಿದ್ಯಾರ್ಥಿನಿ ಅಂಕೋಲಾದ ಕಂತ್ರಿಯ ಸೋನಲ್ ಸಂಜಯ ಮೋದಿ 98.4 ಪ್ರತಿಶತ ಅಂಕಗಳನ್ನು ಪಡೆಯುವ ಮೂಲಕ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸಂಸ್ಕೃತ ಭಾಷಾ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದಿರುವ ಇವಳು, ಇಂಗ್ಲೀಷನಲ್ಲಿ 97, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ತಲಾ 98, ಸಮಾಜ ವಿಜ್ಞಾನದಲ್ಲಿ 99,ಮಾಹಿತಿ ತಂತ್ರಜ್ಞಾನದಲ್ಲಿ 95 ಪ್ರತಿಶತ ಅಂಕ ಗಳಿಸುವ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದ್ದಾಳೆ. ಕಂತ್ರಿ ನಿವಾಸಿಗಳಾಗಿರುವ
ಸಾಮಾಜಿಕ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂಜಯ ಮೋದಿ ಹಾಗೂ ಶ್ರೀ ಶಾರದಾಂಬಾ ಮಹಿಳಾ ಬ್ಯಾಂಕಿನ ಮೆನೇಜರ್ ಆಗಿರುವ ಮಂಜುಷಾ ದಂಪತಿಗಳ ಮಗಳಾದ ಸೋನಲ್ ತನ್ನ ಶೈಕ್ಷಣಿಕ ಸಾಧನೆ ಜೊತೆ ಜೊತೆಯಲ್ಲೇ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿದ್ದಾಳೆ . ವಿದ್ಯಾರ್ಥಿನಿಯ ಈ ಸಾಧನೆಗೆ ಕುಟುಂಬ ಸದಸ್ಯರು, ಆಪ್ತರು, ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದು, ಸೋನಲ್ ಳ ಭವಿಷ್ಯಕ್ಕೆ ಉಜ್ವಲವಾಗಿ ಅಂಕೋಲಾ ತಾಲೂಕು, ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ಶುಭ ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ