ಅಳಕೋಡ ಗ್ರಾ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಅಂಗನಾಡಿ ಕಟ್ಟಡ ಉದ್ಘಾಟನೆ

ಕುಮಟಾ: ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸುಮಾರು 80 ಲಕ್ಷ ರೂ. ರಸ್ತೆ ನಿರ್ಮಾಣದ ಕಾಮಗಾರಿ ಶಂಕು ಸ್ಥಾಪನೆ, 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಗಳ ಉದ್ಘಾಟನೆ ಹಾಗೂ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಯಾಣದ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ, ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಗಜಾನನ ಪೈ, ಅಳಕೋಡ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಕೇಸರಿ ಜೈನ್, ಉಪಾಧ್ಯಕ್ಷರಾದ ಶ್ರೀ ಶ್ರೀಧರ ಪೈ, ಸದಸ್ಯರಾದ ಶ್ರೀ ವಿನಾಯಕ ನಾಯ್ಕ, ಶ್ರೀ ವಿಷ್ಣು ಗೌಡ, ಶ್ರೀ ದೇವು ಗೌಡ, ಶ್ರೀ ಶ್ರೀಧರ ಗೌಡ, ಶ್ರೀ ರಾಜೀವ ಭಟ್ಟ, ಶ್ರೀಮತಿ ನಯನಾ ಗೌಡ, ಶ್ರೀ ಮಹೇಶ ದೇಶಭಂಡಾರಿ, ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಶ್ರಿಮತಿ ನಾಗರತ್ನಾ ನಾಯಕ, ಪಂಚಾಯತ್ ರಾಜ್ ಅಭಿಯಂತರ ಶ್ರೀ ಸಂಜು ನಾಯಕ, ಸಹಾಯಕ ಅಭಿಯಂತರ ಶ್ರೀ ಮಣಿಕಂಠ, ಯುವ ಮೋರ್ಚಾ ಸದಸ್ಯರಾದ ಶ್ರೀ ಕಾರ್ತಿಕ ಭಟ್ಟ, ಶ್ರೀ ಗಣಪತಿ ನಾಯ್ಕ, ಪ್ರಮುಖರಾದ ಶ್ರೀ ವೆಂಕಟರಮಣ ಮರಾಠಿ, ಶ್ರೀ ಹರೀಶ ಗೌಡ, ಶ್ರೀ ನಿಲೇಶ ವಾರೇಕರ, ಶ್ರೀ ಉದಯ ಭಟ್ಟ, ಶ್ರೀ ಶ್ರೀಕಾಂತ ನಾಯ್ಕ, ಶ್ರೀ ಮೋಹನ ಭಂಡಾರಿ, ಶ್ರೀ ಪುರುಷು ಅಂಬಿಗ ಸೇರಿದಂತೆ ಮತ್ತಿತರರು ಇದ್ದರು.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ

Exit mobile version