ಹೆಜ್ಜೇನು ಗೂಡು ತೆರವು : ಇಲಾಖಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಸ್ವಾತಂತ್ರ್ಯೋತ್ಸವ ಆಚರಣೆಗೆ ಇನ್ನಿಲ್ಲ ಆತಂಕ
ಅಂಕೋಲಾ: ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿ ಧ್ವಜ ಕಂಬದ ಹಿಂಬದಿ ಮರವೊಂದರಲ್ಲಿ ಕಟ್ಟಿದ ಹೆಜ್ಜೇನು ಗೂಡನ್ನು ಅರಣ್ಯ ಇಲಾಖೆಯವರು ಇತ್ತೀಚೇಗೆ ತೆರುವು ಗೊಳಿಸಿದ್ದಾರೆ.
ಕಾರು ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವಕ ಸಾವು
ರಾತ್ರಿ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮರದ ಹತ್ತಿರ ಬೆಂಕಿ ಹೊತ್ತಿಸಿ ಅದರ ಹೊಗೆ ಜೇನು ಗೂಡಿಗೆ ಬಡಿವಂತೆ ಕಾರ್ಯಚರಣೆ ಕೈಗೊಂಡಿದ್ದರು. ಇದರಿಂದ ಜೇನು ನೊಣಗಳು ಸ್ಥಳದಿಂದ ಹಾರಿ ಹೋಗಿವೆ.
ಮಾರನೇ ದಿನ ಪಕ್ಕದಲ್ಲಿರುವ ಹೈಮಾಸ್ಕ್ ಕಂಬದ ಮೇಲೆ ಕೆಲವು ಹುಳಗಳು ಗೂಡು ಕಟ್ಟುವ ಪ್ರಯತ್ನವನ್ನು ಜೇನು ನೊಣಗಳು ನಡೆಸಿದವಾದರೂ ರಾತ್ರಿ ದೀಪ ಉರಿದ ಮೇಲೆ ಅಲ್ಲಿಂದ ಹಾರಿ ಹೋಗಿರುವುದಾಗಿ ತಿಳಿದು ಬಂದಿದೆ.
ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದ ಕಾರಣ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿ ಮತ್ತು ಹೊರಗೆ ಸಮಾಜ ಮಂದಿರದ ಎದುರು ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಸೇರುವುದರಿಂದ ಜೇನು ನೊಣಗಳು ದಾಳಿ ನಡೆಸಬಹುದಾದ ಆತಂಕ ಎದುರಾಗಿತ್ತು.
ಸ್ವಾತಂತ್ರ್ಯೋತ್ಸವ ಆಚರಣೆಗೆ ಜೇನು ದಾಳಿಯ ಆತಂಕ? ಸುವರ್ಣ ಧ್ವಜ ಸ್ಥಂಭದ ಹಿಂಬದಿ ಮರದಲ್ಲಿದೆ ಹೆಜ್ಜೇನು ಗೂಡು
ಅಲ್ಲದೇ ಹತ್ತಿರದಲ್ಲೇ ಇರುವ ಬಸ್ ನಿಲ್ದಾಣ, ರಿಕ್ಷಾ ನಿಲ್ದಾಣ, ಕಾರು ಮತ್ತು ಟೆಂಪೋ ಸ್ಟ್ಯಾಂಡ್, ಶಾಲಾ – ಕಾಲೇಜುಗಳು, ಸರ್ಕಾರಿ ಕಛೇರಿಗಳು ಸೇರಿದಂತೆ ವಾಣಿಜ್ಯ ಸಂಕೀರ್ಣ, ಆಸ್ಪತ್ರೆ ಮತ್ತಿತರ ಕಟ್ಟಡಗಳಿದ್ದು ಈ ಭಾಗದಲ್ಲಿ ಸದಾ ಜನ ನಿಬಿಡ ಪ್ರದೇಶವಾಗಿ ಗುರುತಿಸಿಕೊಂಡಿದ್ದು, ಸಾರ್ವಜನಿಕ ಕಳಕಳಿಯಿಂದ ವಿಸ್ಮಯ ವೆಬ್ ನ್ಯೂಸ್ ನಲ್ಲಿ ವಿಸ್ತೃತ ವರದಿ ಪ್ರಕಟಿಸಿ ಜೇನುಗೂಡು ತೆರವಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಗಮನ ಸೆಳೆಯಲಾಗಿತ್ತು.
ಇದೀಗ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ಮಾರ್ಗದರ್ಶನದಲ್ಲಿ ಜೇನು ಗೂಡು ತೆರವು ಮಾಡುವ ಮೂಲಕ ಅರಣ್ಯ ಇಲಾಖೆ ಜನರ ಭಯ ಮತ್ತು ಆತಂಕ ದೂರವಾಗುವಂತೆ ಮಾಡಿದೆ. ತಹಶೀಲ್ದಾರ ಉದಯ ಕುಂಬಾರ ಸಹ ಸಂಬಂಧಿತ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಸೂಚಿಸಿದ್ದು, ಜೇನು ತೆರವು ಗೊಳಿಸಿದ ಸಿಬ್ಬಂದಿಗಳು ಮತ್ತು ಸಂಬಂದಿತ ಇಲಾಖಾ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ