ಮೀನು ಹಿಡಿಯುವ ವೇಳೆ ಮೊಸಳೆ ಹೊತ್ತೊಯ್ದ ವ್ಯಕ್ತಿ ಸಾವು: ಪತ್ತೆಯಾದ ಶವ

ಸತತ ಹುಡುಕಾಟ: ಕಾಳಿ ನದಿಯಲ್ಲಿ ಮೃತದೇಹ ಪತ್ತೆ

ಕಾರವಾರ: ನದಿ ಪಕ್ಕದಲ್ಲಿ ಮೀನು ಹಿಡಿಯುತ್ತಿರುವಾಗ ಮೊಸಳೆ ಎಳೆದೊಯ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸತತ ಹುಡುಕಾಟದ ಬಳಿಕ ದಾಂಡೇಲಿ ಬಳಿ ಕಾಳಿ ನದಿ‌ಯಲ್ಲಿ ಕೊನೆಗೂ ಪತ್ತೆಯಾಗಿದೆ.

Job Alert: ಇಲ್ಲಿದೆ ಉದ್ಯೋಗಾವಕಾಶ

ದಾಂಡೇಲಿಯ ವಿನಾಯಕ ನಗರದ ಅಲೈಡ್ ಬಳಿ ಮೀನು ಹಿಡಿಯುತ್ತಿದ್ದ ಸುರೇಶ್ ವಸಂತ್ ತೇಲಿ(44) ಎನ್ನುವ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿತ್ತು. ಇದನ್ನು ಕೆಲವರು ನೋಡಿದ್ದರು ಎನ್ನಲಾಗಿದೆ.

ನಾಪತ್ತೆಯಾದ ಸುರೇಶನಿಗಾಗಿ ರೆಸ್ಕ್ಯೂ ತಂಡ ಮತ್ತು ಪೊಲೀಸರು ಸತತ ಶೋಧ ಕಾರ್ಯ ನಡೆಸಿ, ಶವವನ್ನು ಪತ್ತೆ ಹೆಚ್ಚಿದ್ದಾರೆ. ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version