ಅಮೃತ ಮಹೋತ್ಸವ, ಹಬ್ಬಗಳ ಸಂಭ್ರಮದ ಮಧ್ಯೆಯೇ ಸದ್ದಿಲ್ಲದೆ ಏರಿಕೆಯಾಗುತ್ತಿದೆ ಕೋವಿಡ್ ಕೇಸ್
ಜಿಲ್ಲೆಯಲ್ಲಿ 21 ಕೋವಿಡ್ ಕೇಸ್ ದೃಢ: 75 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ
ಕಾರವಾರ: ಒಂದೆಡೆ ಅಮೃತ ಮಹೋತ್ಸವದ ಸಂಭ್ರಮ.. ಇನ್ನೊಂದೆಡೆ ಸಾಲು ಸಾಲು ಹಬ್ಬಗಳು.. ಈ ಎಲ್ಲಾ ಸಡಗರ ಸಂಭ್ರಮದ ಮಧ್ಯೆ ಕೋವಿಡ್ ಕೇಸ್ ಜಿಲ್ಲೆಯಲ್ಲಿ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಲಸಿಕೆ ಬಹುತೇಕವಾಗಿ ಆಗಿದ್ದು, ಇನ್ನೇನು ಕೋವಿಡ್ ತೊಲಗೆಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿದಿದಿದೆ. ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 14 ರಂದು ಒಟ್ಟು 21 ಕೋವಿಡ್ ಕೇಸ್ ದೃಢಪಟ್ಟಿದೆ..
Job Alert: ಇಲ್ಲಿದೆ ಉದ್ಯೋಗಾವಕಾಶ
ಜಿಲ್ಲೆಯಲ್ಲಿ ಭಾನುವಾರ 21 ಕೋವಿಡ್ ಕೇಸ್ ದಾಖಲು
ಕಾರವಾರದಲ್ಲಿ 4, ಕುಮಟಾ 4, ಹೊನ್ನಾವರ 3, ಶಿರಸಿ2, ಸಿದ್ದಾಪುರ 5, ಯಲ್ಲಾಪುರ 1, ಹಳಿಯಾಳ 1, ಜೋಯ್ಡಾ ಒಂದು ಸೇರಿ ಒಟ್ಟು 21 ಕೊವಿಡ್ ಕೇಸ್ ಕಾಣಿಸಿಕೊಂಡಿದೆ. ಏಳು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ , ಹೋಮ್ ಐಷೋಲೇಷನ್ ನಲ್ಲಿ 75 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದುವರೆಗೂ ಜಿಲ್ಲೆಯಲ್ಲಿ 827 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಒಟ್ಟನಲ್ಲಿ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೋವಿಡ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು, ಹಲವು ಆತಂಕಕ್ಕೆ ಕಾರಣವಾಗಿದೆ.
ಕಳೆದ ಬಾರಿ ಸರ್ಕಾರದ ಗೊಂದಲದ ನಡೆ: ಕಲಾವಿದರಿಗೆ ಸಂಕಟ
ಕಳೆದ ಬಾರಿ ಸರ್ಕಾರದ ಕೆಲ ಗೊಂದಲದ ನಿರ್ಧಾರಗಳಿಂದಾಗಿ, ಸಾಲು ಸಾಲು ಸುತ್ತೋಲೆಗಳಿಂದಾಗಿ, ಕಠಿಣ ಶರತ್ತುಗಳು, ಗಣೇಶೋತ್ಸವದ ಸಂಭ್ರಮಕ್ಕೆ ಅಡ್ಡಿಯಾಗಿತ್ತು. ಅಲ್ಲದೆ, ಕೊನೇ ಗಳಿಗೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ , ಕೆಲ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿತ್ತು. ಇದರಿಂದಾಗಿ ಉತ್ಸವ ಸಮಿತಿಯವರು, ಕಲಾವಿದರು ಗೊಂದಲಕ್ಕೆ ಈಡಾಗಿದ್ದರು. ಇದೀಗ ಮತ್ತೆ ಕೋವಿಡ್ ಹೆಚ್ಚುತ್ತಿರುವುದು, ಕೆಲವು ಆತಂಕಗಳನ್ನು ಮೂಡಿಸಿದೆ.
ವಿಸ್ಮಯ ನ್ಯೂಸ್, ಕಾರವಾರ