ಶರಾವತಿ ನದಿತೀರದ ಜನರಿಗೆ ಮೂರನೇ ನೋಟೀಸ್ ಜಾರಿ ಹಿನ್ನಲೆ: ಲಿಂಗಮನಕ್ಕೆ ಜಲಾಶಯಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ನೀರನ್ನು ಒಮ್ಮೆಲೆ ಬಿಡುಗಡೆ ಮಾಡದೆ, ಹಂತ ಹಂತವಾಗಿ ನೀರು ಬಿಡುವಂತೆ ಸೂಚನೆ

ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಲಿದ್ದು, ಈ ಹಿನ್ನಲೆಯಲ್ಲಿ ಶರಾವತಿ ನದಿ ತೀರದ ಜನರಿಗೆ ಈಗಾಗಲೇ ಮೂರನೇ ನೋಟೀಸ್ ಜಾರಿ ಮಾಡಲಾಗಿದೆ. ಹೀಗಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕೆ.ಪಿ.ಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನೀರನ್ನು ಒಮ್ಮೆಲೆ ಬಿಡುಗಡೆ ಮಾಡಬಾರದು. ಹಂತ ಹಂತವಾಗಿ ನೀರನ್ನು ಬಿಡಬೇಕು ಹಾಗೂ ಶರಾವತಿ ನದಿ ಪಾತ್ರದ ಜನ, ಜಾನುವಾರುಗಳಿಗೆ ಹಾನಿಯಾಗದ ರೀತಿಯಲ್ಲಿ ಸಂಬoಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಈ ವೇಳೆ ಸೂಚಿಸಿದರು.

ಅಮೃತ ಮಹೋತ್ಸವ, ಹಬ್ಬಗಳ ಸಂಭ್ರಮದ ಮಧ್ಯೆಯೇ ಸದ್ದಿಲ್ಲದೆ ಏರಿಕೆಯಾಗುತ್ತಿದೆ ಕೋವಿಡ್ ಕೇಸ್:ಜಿಲ್ಲೆಯಲ್ಲಿ 21 ಕೋವಿಡ್ ಕೇಸ್ ದೃಢ

ನೀರು ಬಿಡುವ ಪೂರ್ವದಲ್ಲಿ ಮುಂಜಾಗೃತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ

ಅಲ್ಲದೆ, ಪ್ರತಿದಿನ ಡ್ಯಾಮಗೆ ಹರಿದು ಬರುವ ಒಳಹರಿವು ಮತ್ತು ಹೊರ ಹರಿವು ನೀರಿನ ಪ್ರಮಾಣ ಬಗ್ಗೆ ಮಾಹಿತಿ ನೀಡಲು ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಲು ಜಿಲ್ಲಾ ಸಹಾಯವಾಣಿ ಕೇಂದ್ರ ಹಾಗೂ ಹೊನ್ನಾವರ ತಹಶಿಲ್ದಾರರಿಗೆ ತಿಳಿಸಲು ಕೆಪಿಸಿ ಅಧಿಕಾರಿಗಳಿಗೆ ಈ ವೇಳೆ ಸೂಚಿಸಲಾಯಿತು.

ಅಪ್ಸರಕೊಂಡದಲ್ಲಿ ಉಂಟಾದ ಭೂಕುಸಿತದ ಪ್ರದೇಶಗಳಿಗೆ ಭೇಟಿ

ಇನ್ನೊಂದೆಡೆ, ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ಉಂಟಾದ ಭೂಕುಸಿತದ ಪ್ರದೇಶಗಳಿಗೆ ಕಂದಾಯ ಮತ್ತು ಭೂವಿಜ್ಞಾನ & ಗಣಿ ಇಲಾಖಾ ಅಧಿಕಾರಿಗಳೊಂದಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಭೂ ಕುಸಿತ ಆದಂತಹ ಪ್ರದೇಶಗಳಲ್ಲಿ ಶಾಲೆ, ಅಂಗನವಾಡಿ ಹಾಗೂ 60 ಕ್ಕೂ ಹೆಚ್ಚು ಮನೆಗಳಿದ್ದು, ಅಲ್ಲಿ ವಾಸಿಸುವಂತಹ ಜನರನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version