ಮೀನುಗಾರಿಕೆಗೆ ತೆರಳಿದ ವೇಳೆ ಬೋಟಿನಿಂದ ಸಮುದ್ರದಲ್ಲಿ ಬಿದ್ದು ವ್ಯಕ್ತಿ ಸಾವು
ಬಲೆ ಜೋಡಿಸುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ಸಾವು
ಅಂಕೋಲಾ : ಮೀನುಗಾರಿಕೆ ಬೋಟಿನಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಯೋರ್ವ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಬೋಟಿನಿಂದ ಸಮುದ್ರದಲ್ಲಿ ಬಿದ್ದು ಮೃತ ಪಟ್ಟ ಘಟನೆ ಕಾರವಾರ ತಾಲ್ಲೂಕಿನ ಮುದಗಾ ಬಳಿ ಸಂಭವಿಸಿದೆ. ಅಂಕೋಲಾ ತಾಲೂಕಿನ ಬೆಳಂಬಾರ – ಮುಡ್ರಾಣಿ ಗ್ರಾಮದ ನಿವಾಸಿ ಸೋಮೇಶ್ವರ ಗುಣವಂತ ಗೌಡ (32) ಮೃತ ದುರ್ದೈವಿ,
ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವಿಡ್ ಕುಡಿದು ಬಾಲಕ ಸಾವು
ಅನಸೂಯಾ ಗಂಗಾಧರ ಬಾನಾವಳಿಕರ ಮಾಲಿಕತ್ವದ ಕಾತ್ಯಾಯಿನಿ ಬಾಣೇಶ್ವರ ಹೆಸರಿನ ಪರ್ಷಿಯನ್ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಬಲೆ ಜೋಡಿಸುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಬೋಟಿನಿಂದ ಸಮುದ್ರದಲ್ಲಿ ಬಿದ್ದು ಮುಳುಗಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಪಿಐ ಸೀತಾರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆಧಾರಸ್ತಂಭ ಕಳೆದುಕೊಂಡ ಬಡಕುಟುಂಬ: ಬೇಕಿದೆ ನೆರವು
ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿ ನಿಶ್ಚಲಕುಮಾರ್ ಮಾರ್ಗದರ್ಶನದಲ್ಲಿ ಕೆ ಏನ್ ಡಿ ಸಿಬ್ಬಂದಿಗಳು ಮೃತದೇಹವನ್ನು ಸಮುದ್ರ ನೀರಿನಿಂದ ಮೇಲೆತ್ತಲು ಸಹಕರಿಸಿದರು. ಬಡ ಕುಟುಂಬಕ್ಕೆ ಆಧಾರ ಸ್ತಂಭವಾಗಿ ದುಡಿಯುತ್ತಿದ್ದ ಮಗ ಇನ್ನಿಲ್ಲವಾಗಿದ್ದು ಕುಟುಂಬಸ್ಥರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಈ ಕುಟುಂಬಕ್ಕೆ ಬೋಟ್ ಮಾಲಕರು, ಯೂನಿಯನ್, ಮತ್ತು ಸರ್ಕಾರ ಹಾಗೂ ದಾನಿಗಳು ನೆರವಿನ ಹಸ್ತ ಚಾಚಬೇಕಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ. ಗ್ರಾಪಂ ಮಾಜಿ ಅಧ್ಯಕ್ಷ ಮಾದೇವ ಗೌಡ, ಹಾಗೂ ಮೂಡ್ರಾಣಿ ಭಾಗದ ಜನರು ಸೋಮೇಶ್ವರ ಇವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ