ಹೊನ್ನಾವರದಲ್ಲಿ 23, ಕುಮಟಾದಲ್ಲಿ 7 ಕರೊನಾ ಪ್ರಕರಣ ದಾಖಲು?

ಹೊನ್ನಾವರ 23
ಕುಮಟಾ: 7
ಅಂಕೋಲಾ: 4
ಶಿರಸಿ: 12?

[sliders_pack id=”1487″]

ಕಾರವಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಆರ್ಭಟ ಹೆಚ್ಚುತ್ತಲೇ ಇದೆ.

ಹೊನ್ನಾವರಲ್ಲಿ 23 ಕರೊನಾ ಕೇಸ್?
ಹೊನ್ನಾವರ ತಾಲೂಕಿನ ಜನರು ಬುಧವಾರ ಯಾವುದೇ ಪ್ರಕರಣ ದಾಖಲಾಗದೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇಂದು 23 ಕರೊನಾ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಬಂದಿದೆ. ಕರಾವಳಿ ಕಾವಲು ಪಡೆಯ 6 ಸಿಬ್ಬಂದಿ, ಐಆರ್‌ಬಿ ಕಂಪನಿಯ ಇಬ್ಬರು, ಸಾಲ್ಕೋಡಿನಲ್ಲಿ 3, ಚಂದಾವರ, ಅಳ್ಳಂಕಿ, ಅನೀಲಗೋಡ, ಹಳದೀಪುರ ಸೇರಿ ಒಟ್ಟು 23 ಜನರಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

ಕುಮಟಾದಲ್ಲಿ ಏಳು ಕೇಸ್?
ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು ಏಳು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ರಾಮನಗರದ 34 ವರ್ಷ ಮಹಿಳೆ, ಬೆಂಗಳೂರಿನಿOದ ಬಂದ ಹಣ್ಣೆಮಠದ 48 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಐದು ಪ್ರಕರಣಗಳು ಸುವರ್ಣಗದ್ದೆಯಲ್ಲಿ ಪತ್ತೆಯಾಗಿದೆ. ಸುವರ್ಣಗದ್ದೆಯ 40 ವರ್ಷದ ಮಹಿಳೆ, 45 ವರ್ಷದ ಮಹಿಳೆ, 3 ವರ್ಷದ ಮಗು, 21 ವರ್ಷದ ಮಹಿಳೆ, 85 ವರ್ಷದ ವೃದ್ದೆಯಲ್ಲಿ ಸೋಂಕು ಪತ್ತೆಯಾಗಿದೆ.

ಶಿರಸಿಯಲ್ಲಿ 10ಕ್ಕಿಂತ ಅಧಿಕ ಕೇಸ್ ದಾಖಲು?
ಶಿರಸಿಯಲ್ಲೂ ಕರೊನಾ ಹೆಚ್ಚುತ್ತಿದ್ದು, ಇಂದು 10ಕ್ಕಿಂತ ಅಧಿಕ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಕೆಎಚ್‌ಬಿ ಕಾಲೋನಿ, ಕೋರ್ಟ್ ರೋಡ್‌ಗೂ ಕರೊನಾ ನಂಜು ವ್ಯಾಪಿಸಿದೆ.

ಅಂಕೋಲಾದ ನಾಲ್ವರಿಗೆ ಕರೊನಾ?
ಅಂಕೋಲಾದ ಹಾರವಾಡ ಮೂಲದ ಕರಾವಳಿ ಕಾವಲು ಪಡೆಯ ಪೋಲಿಸ್ ಸಿಬ್ಬಂದಿ, ಮುಲ್ಲಾವಾಡದ ಯುವತಿ, ಕೇಣಿ-ಮೂಲಕೇಣಿಯ ಮಹಿಳೆ, ಶಿರಕುಳಿಯ ಯವಕ ಸೇರಿದಂತೆ ತಾಲೂಕಿನ ಒಟ್ಟು 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಭಟ್ಕಳ, ಕಾರವಾರ, ಮುಂಡಗೋಡದಲ್ಲಿ ತಲಾ ಎರಡು ಹಾಗೂ ಯಲ್ಲಾಪುರ, ಸಿದ್ದಾಪುರದಲ್ಲಿ ತಲಾ‌ ಒಂದು ಪ್ರಕರಣ ದೃಢಪಟ್ಟಿರುವ ಸಾಧ್ಯತೆಯಿದೆ.


ಈ ಕುರಿತ ನಿಖರ ಮಾಹಿತಿ ಮತ್ತು ಅಂಕಿ ಸಂಖ್ಯೆ ಸಂಜೆಯ ಹೆಲ್ತ್ ಬುಲೆಟಿನ್‌ನಲ್ಲಿ ದೃಢಪಡಲಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಯಾರು ಅನವಶ್ಯಕವಾಗಿ ಭಯಪಡುವ ಅಗತ್ಯವಿಲ್ಲ. ಅಲ್ಲದೆ, ಸಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಝರ್ ಬಳಸಿ ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕಿದೆ.

ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version