Follow Us On

Google News
Uttara Kannada
Trending

ಅಂಕೋಲಾದಲ್ಲಿ ಇಂದು ನಾಲ್ಕು ಸೋಂಕಿನ ಪ್ರಕರಣಗಳು ದೃಢ?

ಕರಾವಳಿ ಕಾವಲು ಪಡೆಯ ಸಿಬ್ಬಂದಿಗೂ ಸೋಂಕು
ಸಾಮಾನ್ಯ ಜ್ವರ ಲಕ್ಷಣ (ಐ.ಎಲ್.ಐ) ಗಳೇ ಹೆಚ್ಚು

ಅಂಕೋಲಾ: ತಾಲೂಕಿನಲ್ಲಿ ಇಂದು 4 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದ್ದು ಸಂಜೆಯ ಹೆಲ್ತ್ ಬುಲೆಟಿನನಲ್ಲಿ ದೃಢಗೊಳ್ಳಬೇಕಿದೆ.
ಹಾರವಾಡ ಮೂಲದ ಕರಾವಳಿ ಕಾವಲು ಪಡೆಯ ಪೋಲಿಸ್ ಸಿಬ್ಬಂದಿ, ಮುಲ್ಲಾವಾಡದ ಯುವತಿ, ಕೇಣಿ-ಮೂಲಕೇಣಿಯ ಮಹಿಳೆ, ಶಿರಕುಳಿಯ ಯವಕ ಸೇರಿದಂತೆ ತಾಲೂಕಿನ ಒಟ್ಟು 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಹೆಚ್ಚಿನ ಪ್ರಕರಣಗಳು ಸಾಮಾನ್ಯ ಜ್ವರ ಲಕ್ಷಣಗಳಿಂದ (ಐ.ಎಲ್.ಐ) ಕೂಡಿರುವುದರಿಂದ ಜನತೆ ಅನಗತ್ಯ ಆತಂಕ ಪಡಬೇಕಿಲ್ಲ ಎನ್ನವುದು ವೈದ್ಯಕೀಯ ಪರಿಣಿತರ ಅಭಿಪ್ರಾಯವಾಗಿದೆ. ಆದರೂ ಮುನ್ನೆಚ್ಚರಿಕೆ ಅತ್ಯವಶ್ಯಕ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

[sliders_pack id=”1487″]

Back to top button