ವೃದ್ಧೆಯ ಕಾಲಿಗೆರಗಿ ನಮಸ್ಕರಿಸಿದ ಜಿಲ್ಲಾಧಿಕಾರಿಗಳು: ಕಾರಣ ಏನು ಗೊತ್ತಾ? ಸರಳತೆ ಮೆರೆದ ಜಿಲ್ಲಾಧಿಕಾರಿಗಳು

ಸ್ಥಳೀಯರ ಮಾಹಿತಿ ಮೇರೆಗೆ ಹೊಟೇಲ್ ಗೆ ಭೇಟಿ

ಕಾರವಾರ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಹೌದು, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ನಿಮಿತ್ತ ತಾಲೂಕಿನ ಅಂಗಡಿ ಗ್ರಾಮಕ್ಕೆ ಹೋದಾಗ ಗ್ರಾಮದ ಹಿರಿಯ ನಾಗರಿಕರೊಬ್ಬರು ಸ್ವಾತಂತ್ರ್ಯ ಪೂರ್ವದಿಂದಲೂ ಈ ಗ್ರಾಮದಲ್ಲಿ ಹೊಟೇಲ್ ನಡೆಸಿಕೊಂಡು ಬಂದಿದ್ದಾರೆ ಎಂದು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಹೊಟೇಲ್‌ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು.

ರಸ್ತೆಯಲ್ಲಿ ಸಿಕ್ಕಿತ್ತು ಹಣತುಂಬಿದ ಪರ್ಸ್: ಮರಳಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ಶ್ರೀಮತಿ ರುಕ್ಮಾಬಾಯಿ ವಿಠೋಬಾ ಶೇಟಿಯಾ ಅವರು ಕುಟುಂಬವು ಅಂದಾಜು 125 ವರ್ಷಗಳಿಂದ ಹೊಟೇಲನ್ನು ನಡೆಸಿಕೊಂಡು ಬಂದಿದೆ.ನಿರಂತರವಾಗಿ ವೃತದಂತೆ ಈ ಪುಟ್ಟ ಹೊಟೆಲನ್ನು ಜತನದಿಂದ ನಡೆಸುತ್ತಿರುವ ಶ್ರೀಮತಿ ರುಕ್ಮಾಬಾಯಿ ವಿಠೋಬಾ ಶೇಟಿಯಾ ಅವರು 9೦ ಕ್ಕಿಂತಲೂ ಹೆಚ್ಚು ವಯಸ್ಸಿನವರಾಗಿದ್ದು, ಈ ವಯಸ್ಸಿನಲ್ಲೂ ಕೂಡಾ ಲವಲವಿಕೆಯಿಂದ ಹೊಟೇಲ್ ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಬರೀ ಹೊಟೇಲ್ ನಡೆಸುವುದು ಅಷ್ಟೆ ಅಲ್ಲ,‌ ಯಾವುದೇ ಕೃತಕ ಸಾಧನಗಳನ್ನು ಬಳಸದೆ ಪಾವು ಬಾಜಿ, ಮಿಸಳ್ ಬಾಜಿ, ಶೇವು ಶೇಂಗಾ, ಶಂಕರ್ ಪೊಳೆ, ರವಾ ಲಾಡು, ಬುಂದಿ ಲಾಡುಗಳನ್ನು ಮಾಡುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಹೊಟೇಲ್ ಗೆ ಭೇಟಿ‌ ನೀಡಿ, ಅಜ್ಜಿಯ ಜೊತೆ ಮಾತುಕತೆ ನಡೆಸಿದರು. ಅಲ್ಲದೆ ಈ ವೇಳೆ ಅಜ್ಜಿಯ ಕಾಲಿಗೆರಗಿ ನಮಸ್ಕರಿಸಿ, ಸರಳತೆ ಮೆರೆದರು.

ಅನ್ನಪೂರ್ಣೆಯಂತಹ ಹಿರಿಯರಾದ ರುಕ್ಮಾಬಾಯಿ ಅಮ್ಮನ ಆಶೀರ್ವಾದ ಪಡೆಯಲಾಯಿತು.ಸ್ವಾತಂತ್ರ್ಯದ ಅಮೃತ ಮಹೋತ್ಸದ ಈ ಸಮಯದಲ್ಲಿ,ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡ ಬಂದ ಹೊಟೇಲ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ.-

ಮುಲ್ಲೈ ಮುಗಿಲಿನ್ ,ಜಿಲ್ಲಾಧಿಕಾರಿಗಳು

ವಿಸ್ಮಯ ನ್ಯೂಸ್ ಕಾರವಾರ

Exit mobile version