Focus News
Trending

ಗಣೇಶ ಹಬ್ಬದ ಧ್ವನಿವರ್ಧಕ ಮತ್ತು ಸೌಂಡ್ ಸಿಸ್ಟಮ್ ಬಳಕೆಗೆ ಅನುಮತಿಗೆ ಕೋರಿಕೆ: ತಾಲೂಕಿನ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಮನವಿ

ಅಂಕೋಲಾ: ಮುಂಬರುವ ಗಣೇಶ ಚತುರ್ಥಿ ಸಂದರ್ಭದಲ್ಲಿ ಧ್ವನಿವರ್ಧಕ ಮತ್ತು ಸೌಂಡ್ ಸಿಸ್ಟಮ್ ಬಳಕೆಗೆ ಅನುಮತಿ ಕೋರಿ ತಾಲೂಕಿನ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ತಹಶೀಲ್ಧಾರ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ತಲೆಕೆಳಗಾದ ಆಟೋ ರಿಕ್ಷಾ : ನಾಲ್ವರು ಪ್ರಯಾಣಿಕರಿಗೆ ಗಾಯ | ರೇಶನ್ ಒಯ್ಯುಲು ಬಂದವರು ಆಸ್ಪತ್ರೆ ಸೇರಿದರು

ಗಣೇಶ ಚತುರ್ಥಿ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಧ್ವನಿವರ್ಧಕ ಬಳಸಲು ಅವಕಾಶ ನೀಡಬೇಕು ಎಂದು ಸಂಘಟನೆ ವತಿಯಿಂದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಕಾರ್ಯಕ್ರಮಗಳು ಇಲ್ಲದೇ ಧ್ವನಿವರ್ಧಕ ಮತ್ತು ಲೈಟಿಂಗ್ ಪೂರೈಕೆದಾರರು ಅಪಾರ ನಷ್ಟ ಅನುಭವಿಸಿದ್ದು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿರುವ ಸೌಂಡ್ ಸಿಸ್ಟಮ್ ಪರಿಕರಗಳು ಕೆಟ್ಟು ಹೋಗಿವೆ.

ದಯವಿಟ್ಟು ನಿಯಮದಲ್ಲಿ ಸಡಿಲಿಕೆ ಮಾಡಿ

ಈ ವರ್ಷ ಸಹಜ ಪರಿಸ್ಥಿತಿ ಇರುವುದರಿಂದ ಗಣೇಶ ಹಬ್ಬದ ಅದ್ಧೂರಿ ಆಚರಣೆ ನಡೆಯಲಿದೆ ಇಂತಹ ಸಂದರ್ಭದಲ್ಲಿ ಧ್ವನಿವರ್ಧಕ ಗಳ ಬಳಕೆಗೆ ಅವಕಾಶ ಮಾಡಿಕೊಡಬೇಕು,ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬೇಕು ಎನ್ನುವ ನಿಯಮದಲ್ಲಿ ಸಡಿಲಿಕೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಹಶೀಲ್ಧಾರ ಉದಯ ಕುಂಬಾರ ಮತ್ತು ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಮನವಿ ಸ್ವೀಕರಿಸಿದರು.

ತಹಶೀಲ್ದಾರ್ ಅವರಿಗೆ ಮನವಿ

ಧ್ವನಿ ಬೆಳಕು ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿದ್ಯಾಧರ ಮೋಹನ ನಾಯ್ಕ ಪ್ರಮುಖರುಗಳಾದ ಅರುಣ ಗಾಂವಕರ್ ಪೂಜಗೇರಿ, ರಾಘವೇಂದ್ರ ನಾಯ್ಕ ಅವರ್ಸಾ, ಶಶಿಕಾಂತ ವಂದಿಗೆ, ಜಾದವ ನಾಯ್ಕ ಕೇಣಿ, ಪ್ರಶಾಂತ ನಾಯ್ಕ, ಗೌರೀಶ ನಾಯ್ಕ, ಶಿವಾನಂದ ನಾಯ್ಕ, ಕಾರ್ತಿಕ ನಾಯ್ಕ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button