Big NewsImportant
Trending

ಬೈಕಿಗೆ ಡಿಕ್ಕಿಹೊಡೆದ ಅಪರಿಚಿತ ವಾಹನ: ಪೂಜಾಕಾರ್ಯ ಮುಗಿಸಿ ಬರುತ್ತಿದ್ದ ವ್ಯಕ್ತಿ ಸಾವು

ಹಿಟ್ ಆಂಡ್ ರನ್ ಕೇಸ್: ಜನಾನುರಾಗಿ ಪುರೋಹಿತ ಇನ್ನಿಲ್ಲ

ಅಂಕೋಲಾ: ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ ಪಟ್ಟ ಘಟನೆ ರಾ.ಹೆ 63 ರ ಯಲ್ಲಾಪುರದ ಅರಬೈಲ್ ಬಳಿ ಸಂಭವಿಸಿದೆ.  ಅಂಕೋಲಾ ತಾಲೂಕಿನ ಕಲ್ಲೇಶ್ವರ ಮೂಲದ ( ನಿವಾಸಿ) ಗುರುಪ್ರಸಾದ್ ರಾಮಚಂದ್ರ ಗಾಂವಕರ್ (28) ಮೃತ ದುರ್ದೈವಿಯಾಗಿದ್ದಾನೆ. ಪುರೋಹಿತ ಕೆಲಸ ಮಾಡುತ್ತ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಹೆಸರಾಗಿದ್ದ ಇವರು ಒಂದು ಪೂಜಾ ಕಾರ್ಯ ಮುಗಿಸಿ ಯಲ್ಲಾಪುರದ  ಬಾಡಿಗೆ ರೂಂ (ಹಾಲಿ ವಾಸಸ್ಥಳಕ್ಕೆ ) ತೆರಳುತ್ತಿದ್ದರು ಎನ್ನಲಾಗಿದ್ದು ಮಾರ್ಗ ಮಧ್ಯೆ  ರಸ್ತೆ ಅಪಘಾತದಲ್ಲಿ    ಅಸುನೀಗುವಂತಾಗಿದೆ. 

ಕೇಂದ್ರಕ್ಕೆ ಪತ್ರಬರೆದ ವೈದ್ಯ: ಕೂಡಲೇ ಪೆಟ್ರೋಲ್, ಡಿಸೇಲ್ ದರ ಇಳಿಕೆ! ಪತ್ರಬರೆದ ವೈದ್ಯರಿಗೆ ಪ್ರತ್ಯುತ್ತರ ಹೀಗಿದೆ ನೋಡಿ?

ಉದಯೋನ್ಮುಖ ಕವಿಯಾಗಿ ಸಿಂಧೂರ ಕಾವ್ಯನಾಮದ ಅಡಿಯಲ್ಲಿ ಹಲವಾರು ಕವಿತೆಗಳನ್ನು ಇವರು ಬರೆದು ಮೆಚ್ಚುಗೆ ಪಡೆದಿದ್ದರು. ಗುರುಪ್ರಸಾದ್ ಗಾಂವಕರ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ  ಅದಾವುದೋ  ವಾಹನ ಅತಿ ವೇಗವಾಗಿ ಇವರ ಬೈಕ್ ಗೆ ಡಿಕ್ಕಿ ಪಡಿಸಿ ಸ್ಥಳದಿಂದ ನಾಪತ್ತೆ ಆಗಿದೆ.

ಗುರುಪ್ರಸಾದ್ ರಾಮಚಂದ್ರ ಗಾಂವಕರ್ (28) ಮೃತ ದುರ್ದೈವಿ

ಅಪಘಾತದ ರಭಸಕ್ಕೆ ಬೈಕನಿಂದ ಸಿಡಿದು ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದು, ರಸ್ತೆ ಅಪಘಾತ ಕ್ಕೆ  ನಿಖರ ಕಾರಣ ಮತ್ತು ಅಪಘಾತ ಪಡಿಸಿದ ವಾಹನದ ಕುರಿತು ಪೊಲೀಸ ದೂರು ಮತ್ತು ತನಿಖೆ ಬಳಿಕವಷ್ಟೇ  ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ .   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button