ಸಂಬಂಧಿಗಳಿಂದಲೇ ಜೀವ ಬೆದರಿಕೆ| ಕಾಲು ಕೋಟಿಗೂ ಅಧಿಕ ಹಣ ಪಡೆದವರ ಮೇಲೆ ವಂಚನೆ ಪ್ರಕರಣ

ಮೈಸೂರಿನ ಕೆ. ಆರ್. ಎಸ್ ಬಳಿ ಹೋಟೆಲ್ ವ್ಯವಹಾರಕ್ಕೂ ಹಣ ಪಡೆದಿದ್ದ ಆರೋಪಿಗಳು

ಅಂಕೋಲಾ: ನಾನಾ ಕಾರಣಗಳನ್ನು ನೀಡಿ ತಮ್ಮ ಸಂಬಂಧಿ ಯೋರ್ವಳಿಂದ ಕಾಲು ಕೋಟಿಗೂ ಹೆಚ್ಚಿನ ಹಣ ಪಡೆದುಕೊಂಡು, ನಂತರ ಸಹಾಯ ಮಾಡಿದವರು ಹಣ ಮರಳಿಸುವಂತೆ ಕೇಳಿದಾಗ, ಅವರು ಹಣ ಕೇಳಿದ್ದೇ ತಪ್ಪು ಎಂಬಂತೆ ಅವಾಚ್ಯ ಶಬ್ದಗಳಿಂದ ಬಯ್ದು ಜೀವ ಬೆದರಿಕೆ ಹಾಕಿರುವ ಕುರಿತು ಮೈಸೂರು ನಿವಾಸಿಗಳಾದ ಮೂವರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇಂದ್ರಕ್ಕೆ ಪತ್ರಬರೆದ ವೈದ್ಯ: ಕೂಡಲೇ ಪೆಟ್ರೋಲ್, ಡಿಸೇಲ್ ದರ ಇಳಿಕೆ! ಪತ್ರಬರೆದ ವೈದ್ಯರಿಗೆ ಪ್ರತ್ಯುತ್ತರ ಹೀಗಿದೆ ನೋಡಿ?

ಮೈಸೂರು ವಿಜಯನಗರ ನಿವಾಸಿಗಳಾದ ಅಕ್ಷತಾ ಶಿ. ನಾಯ್ಕ , ಶಿವಕುಮಾರ್. ಸಿ ಮತ್ತು ಸೌಮ್ಯ. ಸಿ ಎನ್ನುವವರೇ ಹಣ ಪಡೆದ ಆರೋಪಿಗಳಾಗಿದ್ದು , ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಪಂ ವ್ಯಾಪ್ತಿಯ ಉಪ-ಕೇರಿಯೊಂದರ ನಿವಾಸಿ ಪ್ರಿಯಾಂಕಾ ಎನ್ನುವವರಿಂದ ಮೈಸೂರಿನ ಕೆ.ಆರ್. ಎಸ್ ನಲ್ಲಿ ಹೊಟೇಲ್ ವ್ಯವಹಾರ ನಡೆಸಲು, ಸಾಲ ತೀರಿಸಲು, ಕಾರು ಖರೀದಿ ಮಾಡಲು, ಅನಾರೋಗ್ಯ ಸಮಸ್ಯೆ ಹೀಗೆ 2021ರ ಜೂನ್ 26 ರಿಂದ 2022ರ ಜೂನ್ 22 ರ ವರೆಗೆ ನಾನಾ ಕಾರಣ ನೀಡಿ ಬರೋಬ್ಬರಿ (ಒಟ್ಟು ) 33.80 ಲಕ್ಷ ಹಣ ಬ್ಯಾಂಕ್ ಖಾತೆಗಳ ಮೂಲಕ ಪಡೆದುಕೊಂಡಿದ್ದರು ಎನ್ನಲಾಗಿದೆ.

ದೇಶದ ಗೌರವಾನ್ವಿತ ವಿಭಾಗವೊಂದರಲ್ಲಿ ಸೇವೆಸಲ್ಲಿಸುತ್ತಿರುವ ವ್ಯಕ್ತಿಯೋರ್ವರ ಪತ್ನಿ ಆಗಿರುವ ಪ್ರಿಯಾಂಕಾ,ಆಪತ್ ಕಾಲದಲ್ಲಿ ತನ್ನ ಗಂಡನ ಕುಟುಂಬ ಸಂಬಂಧಿಗಳಿಗೆ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಕೃತಜ್ಞತಾ ಮನೋಭಾವ ತೋರಬೇಕಿದ್ದ ಸಹಾಯ ಪಡೆದು ಕೊಂಡವರು ಹಾಗೆ ಮಾಡದೇ, ಪ್ರಿಯಾಂಕ ಹಣ ಮರಳಿ ಕೇಳುತ್ತಿರುವುದೇ ತಪ್ಪು ಎಂಬಂತೆ ಆರೋಪಿತರಾದ ಅಕ್ಷತಾ ಮತ್ತು ಶಿವಕುಮಾರ್ ಸಿ ಅವರು ಸಹಾಯ ಮಾಡಿದವಳಿಗೆ ಅವಾಚ್ಯ ಶಬ್ದಗಳಿಂದ ಬಯ್ದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು ಈ ಕುರಿತು ಪ್ರಿಯಾಂಕಾ (ಪಿ ಎನ್ ಎನ್) ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Exit mobile version