Important
Trending

ಕೇಂದ್ರಕ್ಕೆ ಪತ್ರಬರೆದ ವೈದ್ಯ: ಕೂಡಲೇ ಪೆಟ್ರೋಲ್, ಡಿಸೇಲ್ ದರ ಇಳಿಕೆ! ಪತ್ರಬರೆದ ವೈದ್ಯರಿಗೆ ಪ್ರತ್ಯುತ್ತರ ಹೀಗಿದೆ ನೋಡಿ?

ವೈದ್ಯರ ಸಲಹೆ ಗಂಭೀರವಾಗಿ ಪರಿಗಣಿಸಿದ ಕೇಂದ್ರ ಹಣಕಾಸು ಸಚಿವಾಲಯ

ಉತ್ತರಕನ್ನಡ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಪೆಟ್ರೋಲ್ ಮತ್ತು ಡಿಸೇಲ್ ದರ ಇದೆ. ಇದನ್ನು ಮನಗೊಂಡ ಶಿರಸಿಯ ವೈದ್ಯರೊಬ್ಬರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಪತ್ರವನ್ನು ಬರೆದಿದ್ದರು. ಶಿರಸಿಯಲ್ಲಿ ಪೆಟ್ರೋಲ್, ಡಿಸೇಲ್ ದರ ರಾಜ್ಯದಲ್ಲಿಯೇ ಹೆಚ್ಚಿರಲು ಕಾರಣ ಏನು ಎಂಬುದನ್ನು ವಿವರಿಸಿದ್ದರು. ವೈದ್ಯರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಹಣಕಾಸು ಸಚಿವಾಲಯ, ಶ್ರೀಘ್ರವಾಗಿ ಕ್ರಮಕೈಗೊಂಡಿದೆ.

Hit and Run Case | ಡಿಕ್ಕಿ ಹೊಡೆದು ಪರಾರಿಯಾದ ಗ್ಯಾಸ್ ಟ್ಯಾಂಕರ್ | ವ್ಯಕ್ತಿ ಸ್ಥಳದಲ್ಲಿಯೇ ಸಾವು

ಪೆಟ್ರೋಲ್ ದರ ಹೆಚ್ಚಳಕ್ಕೆ ಕಾರಣ ಏನಾಗಿತ್ತು?

ಹೌದು, ಶಿರಸಿ ಜನರಿಗೆ ಇನ್ನು ಮುಂದೆ ಪೆಟ್ರೋಲ್, ಡಿಸೇಲ್ ದರ ಕಡಿಮೆ ಆಗಲಿದೆ. ಇಲ್ಲಿನ ಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿಕಿರಣ ಪಟವರ್ಧನ್ ಅವರು, ದರ ಹೆಚ್ಚಳಕ್ಕೆ ಕಾರಣ ವಿವರಿಸಿದ್ದು, ಶಿರಸಿ ತಾಲೂಕಿಗೆ ಹುಬ್ಬಳ್ಳಿ ಬದಲು ಮಂಗಳೂರಿನಿoದ ಇಂಧನ ಪೂರೈಸಲಾಗುತ್ತಿದೆ. ಇದರಿಂದಾಗಿ ಅನಗತ್ಯ ಸಾಗಾಟ ವೆಚ್ಚ ಜನರ ಮೇಲೆ ಬೀಳುತ್ತಿದೆ ವಿವರಿಸಿದ್ದರು. ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಲಾ ಸೀತಾರಾಮನ್, ಕೂಡಲೇ ಕ್ರಮಕ್ಕೆ ಸೂಚಿಸಿದ್ದರು.

ವೈದ್ಯರು ಕೇಂದ್ರಕ್ಕೆ ಬರೆದ ಪತ್ರಕ್ಕೆ ಬಂದ ಉತ್ತರ

ಇದೀಗ ಈಗ ಇಂಡಿಯನ್ ಆಯಿಲ್ ಕಂಪನಿಯಿoದ ಪತ್ರಬರೆದ ವೈದ್ಯರಿಗೆ ಪ್ರತ್ಯುತ್ತರ ಬಂದಿದೆ. ಕೇಂದ್ರದ ಸೂಚನೆಯಂತೆ ಇನ್ನು ಮುಂದೆ ಮಂಗಳೂರಿನಿoದ ಬದಲು ಹುಬ್ಬಳ್ಳಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಲಾಗಿದೆ. ಹೀಗಾಗಿ ಶಿರಸಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ ರೂಪಾಯಿ 1.19 ಮತ್ತು ಡೀಸೆಲ್ ರೂಪಾಯಿ 1.01 ಗಳಷ್ಟು ಕಡಿಮೆಯಾಗಲಿದೆ. ಜನಪರ ಕಾಳಜಿಯ ವೈದ್ಯರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಖ್ಯಾತ ಆಯುರ್ವೇದ ವೈದ್ಯ ಡಾ. ರವಿಕಿರಣ ಪಟವರ್ಧನ್

ವಿಸ್ಮಯ ನ್ಯೂಸ್, ಶಿರಸಿ

Related Articles

Back to top button