ರೆಸಾರ್ಟ್‌ ನಲ್ಲಿ ಮಹಿಳೆಯ ಕೊಲೆ ಮಾಡಿ ನಾಟಕ: ಸಹಜ ಸಾವಂತೆ ಬಿಂಬಿಸಲು ಹೊರಟ ಇಬ್ಬರ ಬಂಧನ

ಒoದೇ ಕಡೆ ಕೆಲಸ ಮಾಡುತ್ತಲೇ ಕೊಲೆಗೆ ಸಂಚು ರೂಪಿಸಿದ ದುಷ್ಕರ್ಮಿಗಳು

ದಾಂಡೇಲಿ: ರೆಸಾರ್ಟ್ ವೊಂದರಲ್ಲಿ ನಡೆದ ಮಹಿಳೆಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಇಲ್ಲಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮಹಿಳೆಯ ಜೊತೆ ಒಂದೇ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತನ್ನ ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ತನಿಖೆಗೆ ಇಳಿದಾಗ, ಸತ್ಯ ಬಯಲಾಗಿದೆ.

ಕಳ್ಳತನ ಮಾಡಿ ಓಡಿ ಹೋಗುತ್ತಿದ್ದವರು ಸಿಕ್ಕಿಬಿದ್ದಿದ್ದೆ ರೋಚಕ! ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು

ಜೊಯಿಡಾ ತಾಲ್ಲೂಕಿನ ಪೊಟೋಲಿಯಲ್ಲಿರುವ ನೇಚರ್ ನೆಸ್ಟ್ ಹೋಂಸ್ಟೇಯಲ್ಲಿ ಕಳೆದ ಒಂದು ವರ್ಷದಿಂದ ಅಡುಗೆ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಗಾಂಧಿನಗರ ಆಶ್ರಯ ಕಾಲೋನಿ ನಿವಾಸಿಯಾಗಿರುವ 50 ವರ್ಷ ವಯಸ್ಸಿನ ಸುಶೀಲಾ ಬೋವಿವಡ್ಡರ ಕೊಲೆಯಾದ ಮಹಿಳೆ. ಈಕೆಯ ಜೊತೆ ಕೆಲಸ ಮಾಡುತ್ತಿದ್ದ ದಾಂಡೇಲಿಯ ಗಾಂಧಿನಗರ ಆಶ್ರಯ ಕಾಲೋನಿ ನಿವಾಸಿ ರವಿಚಂದ್ರ ರೆಡ್ಡಿಯು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಇನ್ನೋರ್ವ ಆರೋಪಿ ದಾಂಡೇಲಿಯ ಗಾಂಧಿನಗರ ಆಶ್ರಯ ಕಾಲೋನಿ ನಿವಾಸಿ ಹಾಗೂ ನೇಚರ್ ನೆಸ್ಟ್ ಹೋಂಸ್ಟೇಯಲ್ಲಿ ಹೌಸ್ ಕಿಪಿಂಗ್ ಕೆಲಸ ನಿರ್ವಹಿಸುತ್ತಿದ್ದ ವಿಜಯ ಮಹಾದೇವ ಮಾಸಾಳ ಕೊಲೆಗೆ ಸಾಥ್ ನೀಡಿದ್ದಾನೆ ಎನ್ನಲಾಗಿದೆ. ಮಹಿಳೆಯ ಮೃತ ದೇಹವನ್ನು ದಾಂಡೇಲಿಗೆ ತೆಗೆದುಕೊಂಡು ಬಂದು, ಮಹಿಳೆಯು ಸಹಜ ಸಾವನ್ನಪ್ಪಿದ್ದಾರೆಂದು ಬಿಂಬಿಸಲು ಪ್ರಯತ್ನಿಸಿದ್ದರು. ಇದೀಗ ಇಬ್ಬರನ್ನೂ ಬಂಧಿಸಲಾಗಿದೆ. ಕೊಲೆಗೆ ಇನ್ನು ತಖಿರ ಕಾರಣ ತಿಳಿದುಬಂದಿಲ್ಲವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version