ಹೊನ್ನಾವರ: ತಾಲೂಕಿನ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಶೆಟರ್ ಹಾಗೂ ಬಾಗಿಲಕ್ಕೆ ಅಳವಡಿಸಿದ್ದ ಬೀಗವನ್ನು ಮುರಿದು ಕಳ್ಳತನಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಅಂಕೋಲಾ ಬಬ್ರುವಾಡದ ಪ್ರಶಾಂತ ಕಿಶೋರ ನಾಯ್ಕ, ಯಲ್ಲಾಪುರದ ಪ್ರಸನ್ನ ಜಾದವ ಬಂಧಿತ ಆರೋಪಿಗಳು.
ಬೆಳಗಿನ ಜಾವ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಕಛೇರಿಯ ಬಾಗಿಲು ಒಡೆದು ಒಳಗೆ ನುಗ್ಗಿ ಕಪಾಟುಗಳನ್ನು ಒಡೆದು ಕಪಾಟಿನಲ್ಲಿದ ವಸ್ತುಗಳನ್ನು ಚೆಲ್ಲಾಪಿಲ್ಲಯಾಗಿ ಬೀಸಾಡಿ ಅದರಲ್ಲಿ ಇದ್ದ 5,350/- ನಗದು ಹಣವನ್ನು ಕಳವು ಮಾಡಿದ್ದರು.. ಆರೋಪಿಗಳನ್ನು ಬಂಧಿಸಿ, ಕಳುವಾದ ಹಣವನ್ನು ವಸೂಲಿ ಮಾಡುವಂತೆ ಸಂಘದ ನಿರ್ವಾಹಕರು ದೂರು ದಾಖಲಿಸಿದ್ದರು.
ಕಳುವು ಮಾಡಿಕೊಂಡು ಹೋಗುತ್ತಿರುವಾಗ ಪಕ್ಕದ ಮನೆಯವರು ಆರೋಪಿಗಳನ್ನು ನೋಡಿ ಮಾಡಿದ್ದೇನು?
ಕಳುವು ಮಾಡಿಕೊಂಡು ಹೋಗುತ್ತಿರುವಾಗ ಪಕ್ಕದ ಮನೆಯವರು ಮತ್ತು ಚಿಕ್ಕನಕೋಡ ಗ್ರಾಮದ ಜನರು ಸೇರಿ ಆರೋಪಿ ಪ್ರಶಾಂತ ಕಿಶೋರ ನಾಯ್ಕ ಎನ್ನುವ ವ್ಯಕ್ತಿಯನ್ನು ಹಿಡಿದಿದ್ದಾರೆ, ಬಳಿಕ ಪೋಲಿಸರಗೆ ಒಪ್ಪಿಸಿದ್ದು, ಮತ್ತೊಬ್ಬ ಆರೋಪಿ ಪ್ರಸನ್ನ ಜಾಧವ ಅನ್ನುವ ವ್ಯಕ್ತಿ ತಪ್ಪಿಸಿಕೊಂಡು ಹೋಗಿದ್ದ. ಸುಮಾರು 20 ಫೀಟ್ ಎತ್ತರದಿಂದ ಜಿಗಿದು ಪರಾರಿಯಾಗಿದ್ದ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ:
ಹೊನ್ನಾವರ: ಚಿಕ್ಕನಕೋಡ್ ವಿಎಸ್ ಎಸ್ ಗ್ರಾಹಕರು ಯಾವುದೇ ಆತಂಕ ಪಡುವುದು ಬೇಡ. ಗ್ರಾಹಕರ ಎಲ್ಲ ಸ್ವತ್ತು ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಆರ್ ಪಿ ನಾಯ್ಕ ತಿಳಿಸಿದ್ದಾರೆ. ಅಲ್ಲದೆ, ಸಂಘದ ಯಾವುದೇ ಸ್ವತ್ತು ಕಳ್ಳರ ಪಾಲಾಗುವುದು ಸಾರ್ವಜನಿಕರ ಸಮಯ ಪ್ರಜ್ಞೆ, ಬದ್ಧತೆ ಯಿಂದ ಸಂಘಕ್ಕೆ ಆಗುವ ದೊಡ್ಡ ಹಾನಿಯು ತಪ್ಪಿದೆ . ಸಂಘದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿವುದು ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ