Important
Trending

ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆ: ಓರ್ವ ನಾಪತ್ತೆ

ಇಬ್ಬರ ರಕ್ಷಣೆ: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ನಡೆದಿದೆ. ಘಟನೆಯಲ್ಲಿಓರ್ವ ಮೀನುಗಾರ ನಾಪತ್ತೆಯಾಗಿದ್ದು, ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ದೋಣಿ ಮುಳುಗಡೆಯಾಗಿ ನಾಪತ್ತೆಯಾದ ಮೀನುಗಾರರನ್ನು ನಾಗರಾಜ ರಾಮಕೃಷ್ಣ ಮೊಗೇರ ಜಾಲಿ ನಿವಾಸಿ ಎಂದು ತಿಳಿದು ಬಂದಿದೆ. ರಕ್ಷಣೆಯಾದವರನ್ನು ವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ್ ಎನ್ನಲಾಗಿದೆ.

ಕೇಂದ್ರಕ್ಕೆ ಪತ್ರಬರೆದ ವೈದ್ಯ: ಕೂಡಲೇ ಪೆಟ್ರೋಲ್, ಡಿಸೇಲ್ ದರ ಇಳಿಕೆ! ಪತ್ರಬರೆದ ವೈದ್ಯರಿಗೆ ಪ್ರತ್ಯುತ್ತರ ಹೀಗಿದೆ ನೋಡಿ?

ಈ ಮೂವರು ಮೀನುಗಾರ ಇಂದು ಮೀನುಗಾರಿಕೆಗೆ ತೆರಳಿದ ವೇಳೆ ಅಲೆಯ ಹೊಡೆತಕ್ಕೆ ದೋಣಿ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ ಮೂವರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಇನ್ನಿಬ್ಬರು ಮುಳುಗಡೆಯಾದ ದೋಣಿಯಿಂದಲೇ ರಕ್ಷಣೆ ಮಾಡಿಕೊಂಡು ದಡ ಸೇರಿದ್ದಾರೆ. ಸದ್ಯ ರಕ್ಷಣೆಯಾದ ಮೀನುಗಾರರು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾಪತ್ತೆಯಾದ ಮೀನುಗಾರನಿಗಾಗಿ ಬೋಟಗಳ ಮೂಲಕ ಶೋಧಕಾರ್ಯ ನಡೆಸುತ್ತಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button