ಕಾರವಾರ :ಮನೆಯಲ್ಲಿಯೇ ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ವೇಳೆ ಜಿಲ್ಲಾ ಪೊಲೀಸರ ವಿಶೇಷ ತಂಡ ದಾಳಿ ನಡೆಸಿ ಒಂದು ನಾಡ ಬಂದೂಕು ಮತ್ತು ಬಂದೂಕು ತಯಾರಿಸುವ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಗದ್ದೆಗೆ ತೆರಳಿದ್ದಾಗ ದಿಡೀರ್ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಹಿನ್ನಲೆ ಗಾಯಕ
ಕಾರವಾರ ತಾಲೂಕಿನ ಗೋಪಿಶಿಟ್ಟಾ ಬರ್ನಾವಾಡಾ ನಿವಾಸಿ ಸಂಜು ವಿನಾಯಕ ಆಚಾರಿ (48) ಬಂಧಿತ ಆರೋಪಿಯಾಗಿದ್ದು ಈತ ತನ್ನ ಮನೆಯ ಹಿಂಬದಿಯ ತಗಡಿನ ಶೆಡ್ಡಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಒಂಟಿ ನಳಿಕೆಯ ನಾಡ ಬಂದೂಕು ( ಸಿಂಗಲ್ ಬ್ಯಾರೆಲ್ ಗನ್ ) ತಯಾರಿಸಿ ಇಟ್ಟುಕೊಂಡಿದ್ದ ಎನ್ನಲಾಗಿದ್ದು ಬಂದೂಕು ತಯಾರಿಕೆಗೆ ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿತನ ಮೇಲೆ ಶಸ್ತ್ರಾಸ್ತ್ರ ಖಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಚಿತ್ತಾಕುಲ ಪಿ.ಎಸ್.ಐ ವಿಶ್ವನಾಥ ನಿಂಗೊಳ್ಳಿ ಸಿಬ್ಬಂದಿಗಳಾದ ಎಚ್. ಸಿ.ರಾಘವೇಂದ್ರ, ಗುರುರಾಜ ನಾಯ್ಕ, ಭಗವಾನ ಗಾಂವಕರ್, ಸಂತೋಷ ಕೆ.ಬಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ.ಸುಮನ್ ಪನ್ನೇಕರ್ ಕಾರ್ಯಾಚರಣೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.